ಕೊಟ್ಟಿಗೆಹಾರ:ಬಾಳೂರು ಹೋಬಳಿಯ ನಿಡುವಾಳೆ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ ನಡೆಯಿತು. ಕಲಾಕೃತಿಯ ರಾಮೇಶ್ವರ ದೇವಸ್ಥಾನವನ್ನು ಹೂವುಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ಅಲಂ ಕರಿಸಲಾಗಿತ್ತು. ಮೂರು ಸಾವಿರಕ್ಕೂ ಹೆಚ್ಚು ಅಣತೆಗಳು ದೇವಸ್ಥಾನದಲ್ಲಿ ಪ್ರಜ್ವಲಿಸಿದವು. ಸುಡುಮದ್ದು ಪ್ರದರ್ಶನ ಭಕ್ತರ ಗಮನ ಸೆಳೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕ್ಷೇತ್ರದ ಆಡಳಿತಾಧಿಕಾರಿ ಸುನಿಲ್ ಜೆ.ಗೌಡ ಹಾಗೂ ಶ್ವೇತಾ ಸುನಿಲ್ ಗೌಡ ಚಾಲನೆ ನೀಡಿ ದರು.ಬಳಿಕ ಮಾತನಾಡಿದ ಸುನಿಲ್ ಜೆ.ಗೌಡ, ಕಾರ್ತಿಕ ಮಾಸ ಅತ್ಯಂತ ಶ್ರೇಷ್ಠ ಮತ್ತು ಪವಿತ್ರ ಮಾಸವಾಗಿದೆ.ಹಣತೆಗಳ ದೀಪಾರಾಧನೆ ಮಾಡುವುದರಿಂದ ಕ್ಷೇತ್ರದ ಜನರಿಗೆ ಐಶ್ವರ್ಯ,ಸಂಪತ್ತು ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ ‘ಎಂದರು.
ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ದಾಂತ್ ಗೌಡ,ಲಕ್ಷ್ಮಿ ಲಕ್ಷ್ಮಣ್ ಗೌಡ,ಗೀತಾ ಗೌಡ, ರೂಪಗೌಡ,ಮಾಜಿ ಅರ್ಚಕರಾದ ರಾಮ್ ಭಟ್,ಮಧುಕರ ಗೋಖ ಲೆ,ವ್ಯವಸ್ಥಾಪಕರಾದ ನಾಗರಾಜ್ ಭಟ್,ಅರ್ಚಕರಾದ ಚರಣ್ ಕಾರಂತ್,ದಿನಕರ ಭಟ್,ಸೂರ್ಯನಾರಾಯಣ್,ಗ್ರಾಮಸ್ಥರಾದ ಶಿವಪ್ಪ,ಆಟೋ ವಿಶ್ವ,ಸುಬ್ರಾಯ ಗೌಡ,ಎಚ್.ಆರ್.ಚಂದ್ರಶೇಖರ್,ಬಿ.ರವಿ ಉರ್ವಿನ್ ಖಾನ್, ಜಯಂತ್ ಪೂಜಾರಿ,ಮುರಳಿ ಜಾವಳಿ ,ಚಂದ್ರಶೇಖರ್, ಶೇಖರ್, ನಾಗೇಶ್ ಸಪಾಲ್ಯ, ಸುರೇಶ್,ಸುಮಿತ್ರಾ ಜಗನ್ನಾಥ್, ಶಂಕರ್ ಮತ್ತಿತರರು ಇದ್ದರು.
———––ಆಶಾ ಸಂತೋಷ್