ಕೆ.ಆರ್.ಪೇಟೆ-ಕಣದಿಂದ-ನಿವೃತ್ತಿ-ಪುರುಷೋತ್ತಮ್-ಚಕ್ರಪಾಣಿ- ತಂಡಕ್ಕೆ-ಬೆಂಬಲ

ಕೆ.ಆರ್.ಪೇಟೆ: ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಎಂಟು ಮಂದಿ ಕಣದಿಂದ ನಿವೃತ್ತಿ ಹೊಂದುವ ಮೂಲಕ ಸಂಘದ ಹಾಲಿ ಅಧ್ಯಕ್ಷ ಕೆ.ಪುರುಷೋತ್ತಮ್ ಮತ್ತು ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ.ಟಿ.ಚಕ್ರಪಾಣಿ ಅವರ ತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.


ಪಟ್ಟಣದ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾದ ಕೆ.ಎಸ್.ಕುಮಾರ್, ಕಾಡುಮೆಣಸ ಕೆ.ಕೆ.ರಾಜೇಗೌಡ, ಪುರ ಉಮೇಶ್, ಹಿರೀಕಳಲೆ ಪರಮೇಶ್ವರಪ್ಪ, ಹಿರೀಕಳಲೆ ನಾಗರಾಜು, ಕೆ.ಎನ್.ಕೃಷ್ಣ, ಬಿಸಿಎಂ.ಎ.ಮೀಸಲು ಕ್ಷೇತ್ರದ ಕಾಡುಮೆಣಸ ಬಲರಾಂ, ಪ.ಜಾ.ಮೀಸಲು ಕ್ಷೇತ್ರದ ಅಂಬೇಡ್ಕರ್ ನಗರದ ಶಿವಪ್ರಕಾಶ್ ಅವರು ಕಣದಿಂದ ನಿವೃತ್ತಿ ಘೋಷಣೆ ಮಾಡಿ ಕೆ.ಪುರುಷೋತ್ತಮ್ ಮತ್ತು ಕೆ.ಟಿ.ಚಕ್ರಪಾಣಿ ತಂಡಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಮಯಾವಕಾಶದಿಂದ ನಾಮಪತ್ರ ವಾಪಸ್ ಪಡೆಯಲು ಸಾಧ್ಯವಾಗದೇ ಇರುವ ಕಾರಣ ನಿವೃತ್ತಿ ಘೋಷಣೆ ಮಾಡಿರುವುದಾಗಿ ಕೆ.ಎಸ್.ಕುಮಾರ್, ಕೆ.ಕೆ.ರಾಜೇಗೌಡ, ಉಮೇಶ್, ಪರಮೇಶ್ವರಪ್ಪ, ನಾಗರಾಜು, ಕೆ.ಎನ್.ಕೃಷ್ಣ, ಬಲರಾಂ, ಶಿವಪ್ರಕಾಶ್ ಅವರು ತಿಳಿಸಿದ್ದು, ಕೆ.ಪುರುಷೋತ್ತಮ್ ಮತ್ತು ಕೆ.ಟಿ.ಚಕ್ರಪಾಣಿ ಅವರ ತಂಡದ ಪರವಾಗಿ ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹರೀಕಳಲೆ ಮಂಜುನಾಥ್, ಹಿರೀಕಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ, ಪುರಸಭೆಯ ಮಾಜಿ ಅಧ್ಯಕ್ಷ ಕೆ.ಟಿ.ಚಕ್ರಪಾಣಿ, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್, ಪುರಸಭೆಯ ಮಾಜಿ ಸದಸ್ಯರಾದ ಕೆ.ವಿನೋದ್‌ಕುಮಾರ್, ರಾಜಾನಾಯಕ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ನಿರ್ದೇಶಕ ಸಿ.ಎನ್.ಮಂಜೇಗೌಡ, ತಾಲ್ಲೂಕು ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

-ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?