ಕೆ.ಆರ್.ಪೇಟೆ: ಕಬಡ್ಡಿ ಕ್ರೀಡೆ ನಮ್ಮ ದೇಶೀಯ ಆಟವಾಗಿದ್ದು, ಆರೋಗ್ಯ ಮತ್ತು ದೈಹಿಕ ಕ್ಷಮತೆ ಹೆಚ್ಚಿಸುತ್ತದೆ ಪ್ರಮುಖ ಕ್ರೀಡೆಯಾಗಿದೆ ಎಂದು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು
ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವದ ಪ್ರಯುಕ್ತ ಅಕ್ಕಿಹೆಬ್ಬಾಳು ರೆಬಲ್ ಸ್ಟಾರ್ ಅಂಬರೀಷ್ ಯುವಕರ ಸಂಘದ ಹಾಗೂ ಭಜರಂಗಿ ಬಾಯ್ಸ್ ಮತ್ತು ಎಸ್.ಎಲ್.ಎಸ್.ಕೆ ಬಾಯ್ಸ್ ವತಿಯಿಂದ ಸರ್ಕಾರಿ ಶಾಲಾ ಆವರಣ ನೆಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ವೀರಾಂಜನೇಯ ಕಪ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಕ್ಕಿಹೆಬ್ಬಾಳು ಗ್ರಾಮದಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿ ನಡೆಯುತ್ತಿರುವುದು ಮಾದರಿ ವಿಚಾರ. ಮುಂದೆ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆಯುವಂತಾಗಲಿ ಎಂದ ಅವರು ಸೋಲು-ಗೆಲುವು ಲೆಕ್ಕಕ್ಕೆ ಇಟ್ಟುಕೊಳ್ಳದೆ ಕ್ರೀಡೆಯಲ್ಲಿ ಸಕ್ರಿಯರಾಗಬೇಕು. ಕ್ರೀಡಾಸ್ಫೂರ್ತಿ ಮೆರೆಯುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಲಕ್ಷಣ.

ಇತ್ತೀಚಿನ ದಿನಗಳಲ್ಲಿ ಯುವಕರು ದೇಶಿಯ ಕ್ರೀಡೆಗಳನ್ನು ನಿರ್ಲಕ್ಷಿಸಿ ಕ್ರಿಕೆಟ್ ವ್ಯಾಮೋಹಕ್ಕೆ ಒಳಗಾಗಿರುವುದು ವಿಷಾದನೀಯ ಸಂಗತಿ. ಇಡೀ ಗ್ರಾಮವೇ ಕಬಡ್ಡಿ ಪಂದ್ಯಾವಳಿಗೆ ಹಬ್ಬದ ಸಂಭ್ರಮ ನೀಡಿರುವುದು ಯುವಕರಲ್ಲಿ ಪುರಾತನ ಕ್ರೀಡೆಗಳ ಬಗ್ಗೆ ಇರುವ ಒಲವು ಇತರರಿಗೆ ಆದರ್ಶಪ್ರಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ,ಗ್ರಾ.ಪಂ ಅಧ್ಯಕ್ಷ ಹರೀಶ್,ಸದಸ್ಯೆ ರಕ್ಷಿತ ದಿನೇಶ್, ಮುಖಂಡರಾದ ಜಮೀರ್ ಅಹಮದ್, ಸತೀಶ್, ಲೋಕೇಶ್, ಜೀವನ್, ನಂದನ್,ಆಕಾಶ್, ರವಿ, ಅಭಿನಂದನ್ , ಸೇರಿದಂತೆ ವಿವಿಧ ಅವರ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.
- ಮನು ಮಾಕವಳ್ಳಿ ಕೆ ಆರ್ ಪೇಟೆ