ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ವಿಠಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ಎಲ್ಲಾ 11 ನಿರ್ದೇಶಕರು ಜಯಗಳಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ನಿರ್ದೇಶಕರ ವಿವರ:
ಸಾಮಾನ್ಯ ಕ್ಷೇತ್ರದಿಂದ ವಿ.ಡಿ.ಹರೀಶ್, ವಿಸಿ ಪುಟ್ಟಸ್ವಾಮಿಗೌಡ,ವಿ ಎಸ್.ಯೋಗೇಶ್,ಉಮೇಶ್,ಮಹದೇಶ್,ಹಿಂದುಳಿದ ಎ ಮೀಸಲು ಕ್ಷೇತ್ರದಿಂದ ಚಿಕ್ಕೇಗೌಡ,ಬಿಸಿಎಂ ಬಿ ಆರ್ ಸುರೇಶ್,ಮಹಿಳಾ ಮೀಸಲು ಕ್ಷೇತ್ರದಿಂದ ಇಂದ್ರಮ್ಮ ಸಣ್ಣತಮ್ಮೇಗೌಡ, ಸುದಾ ಯೋಗೇಶ್,ಪರಿಶಿಷ್ಟಜಾತಿ ಕ್ಷೇತ್ರದಿಂದ ಚಲುವರಾಜು, ಸಾಲಗಾರರಲ್ಲದ ಕ್ಷೇತ್ರದಿಂದ ವಿ.ಆರ್.ಪುಟ್ಟರಾಜು ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್ ಕುಮಾರ್, ಸಹ ಚುನಾವಣಾ ಅಧಿಕಾರಿಯಾಗಿ ಸಂಘದ ಸಿಇಓ ಎಂ.ಆರ್.ಪ್ರಶಾಂತ್ ಕಾರ್ಯನಿರ್ವಹಣೆ ಮಾಡಿದರು.

ನೂತನವಾಗಿ ಭರ್ಜರಿ ಗೆಲುವು ಸಾಧಿಸಿದ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ವಿ.ಡಿ.ಹರೀಶ್ ಅವರು ನಮ್ಮ ತಂಡದ ಗೆಲುವಿಗೆ ಸಹಕಾರ ನೀಡಿದ ಸಂಘದ ವ್ಯಾಪ್ತಿಯ ಎಲ್ಲಾ ಸಹಕಾರಿ ಧುರೀಣರಿಗೆ, ಶಾಸಕರಾದ ಹೆಚ್.ಟಿ.ಮಂಜು, ಮಾಜಿ ಸಚಿವರಾದ ನಾರಾಯಣಗೌಡರು ಸೇರಿದಂತೆ ಜೆಡಿಎಸ್- ಬಿಜೆಪಿ ಮುಖಂಡರಿಗೆ ನಾನು ಹೃದಯಸ್ಪರ್ಶಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ವಿ.ಡಿ.ಹರೀಶ್ ಅವರು ತಿಳಿಸಿದರು.
ತಮ್ಮನ್ನು ವಯಕ್ತಿಕ ಟೀಕೆ ಮಾಡಿದ್ದ ವಿಠಲಾಪುರ ಸುಬ್ಬೇಗೌಡ ಮತ್ತು ಸೋಮೇಗೌಡ ವಿರುದ್ದ ವಾಗ್ದಾಳಿ ನಡೆಸಿ,ನಾನು 15ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ, ಅಧ್ಯಕ್ಷನಾಗಿ ಮಾಡಿರುವ ಪ್ರಾಮಾಣಿಕ ಸೇವೆಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ಒಂದೇ ಒಂದು ರೂಪಾಯಿ ತಿಂದಿಲ್ಲ. ಚುನಾವಣಾ ಪೂರ್ವ ದಲ್ಲಿ ಸುಬ್ಬೇಗೌಡ ಮತ್ತು ಸೋಮೇಗೌಡ ಇವರು ಮಾಡಿರುವ ಆರೋಪವನ್ನು ದಾಖಲೆ ಸಮೇತ ಸಾಬೀತು ಮಾಡಿದ್ದಲ್ಲಿ ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿ ಸವಾಲು ಹಾಕಿದರು.

ಈ ಹಿಂದೆ ನಮ್ಮ ತಂದೆ ವಿ.ಡಿ.ದೇವೇಗೌಡರು ಸೋತ ಎದುರಾಳಿಯ ವಿರುದ್ದ ಹಗುರವಾಗಿ ಮಾತನಾಡುವ ಕೆಲಸ ಮಾಡಿಲ್ಲ. ನಮಗೂ ಅದನ್ನೇ ಹೇಳುತ್ತಿದ್ದರು. ಇದೂವರೆವಿಗೂ ನಾವೂ ಸಹ ಮಾಡುವುದಿಲ್ಲ.ಆದರೆ ಈ ಭಾರಿ ಸುಬ್ಬೇಗೌಡ ಮತ್ತು ಸೋಮೇಗೌಡ ಅವರು ನಮ್ಮನ್ನು ವಯಕ್ತಿಕವಾಗಿ ಟೀಕೆ ಮಾಡಿದ್ದರಿಂದ ಅನಿವಾರ್ಯವಾಗಿ ತಂದೆಯವರ ಕ್ಷಮೆ ಕೇಳಿ ಟೀಕೆ ಮಾಡಿದ್ದಾಗಿ ವಿ.ಡಿ.ಹರೀಶ್ ಮಾರ್ಮಿಕವಾಗಿ ತಿಳಿಸಿದರು.
ಆಯ್ಕೆಯಾದ ನೂತನ ನಿರ್ದೇಶಕರನ್ನು ಶಾಸಕ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ಶೈಲೇಂದ್ರ,ಪಟೇಲ್ ವಿ ಡಿ ಶಂಕರ್,ವಿ ಸಿ ವೆಂಕಟೇಶ್,ರಾಜಶೇಖರ್,ಹೋರಿ ದೇವೇಗೌಡ, ದ್ಯಾವರಸೇಗೌಡ,ಸೋಮಶೇಖರಯ್ಯ,ನಂದರಾಜಯ್ಯ,ವೀರಭದ್ರಯ್ಯ, ವಿ ಡಿ.ಮೋಹನ್, ಚೇತನಕುಮಾರ್, ವೆಂಕಟೇಶ್, ದೊದ್ದನಕಟ್ಟೆ ಕಿರಣ್, ನಾರಾಯಣ್,ಶಾನುಭೋಗ್,ರಾಮ,ಶಿವಶಂಕರೇಗೌಡ,ಗೋವಿಂದೇಗೌಡ,ಐ ಟಿ ಸೋಮ,ನಾಗಣ್ಣ,ಚೇತು(ಶ್ರೀಕಂಠೇಗಗೌಡ),ಎ ಎಂ ಕುಮಾರ್, ಕೂಡಲಕುಪ್ಪೆ ಗ್ರಾಮ ಪಂಚಾಯತಿ ಲೋಕೇಶ್,ದೂತ ಶಂಕರ್,ದೊಡ್ಡಣ್ಣನ ಶಂಕರ್,ಕಾಪನಹಳ್ಳಿ ನಾಗೇಶ್,ಪಾಪೇಗೌಡ ಮತ್ತಿತರರು ಅಭಿನಂದಿಸಿದರು.
– ಶ್ರೀನಿವಾಸ್ ಆರ್.