ಹಾಸನ:ಶಿವಮೊಗ್ಗ ವಲಯದ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಗೆ 16ವರ್ಷದೊಳಗಿನ 30 ಜನ ಆಟಗಾರರನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು ಕೊನೆಯ 15 ಸ್ಪರ್ದಿಗಳ ಆಯ್ಕೆ ಬಾಕಿಯಿದೆ ಎಂದು ಹಾಸನ ಜಿಲ್ಲಾ ಕ್ರಿಕೆಟ್ ಸಂಚಾಲಕ ರಕೀಬ್ ತಿಳಿಸಿದರು.
ನಗರದ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 16ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ನಡೆದ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿವಮೊಗ್ಗ ವಲಯದ 16 ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹಾಸನ ಜಿಲ್ಲೆಯ ನಾನಾ ಭಾಗಗಳಿಂದ ಕ್ರಿಕೆಟ್ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿತ್ತು.ಸುಮಾರು 60 ಜನ ಕ್ರಿಕೆಟ್ ಕ್ರೀಡಾಪಟುಗಳು ಬಂದಿದ್ದು ಅದರಲ್ಲಿ 30 ಜನ ಆಯ್ಕೆಯಾಗಿದ್ದಾರೆ.ಮುಂಬರುವ ಶುಕ್ರವಾರ ಮತ್ತು ಶನಿವಾರ 30 ಜನರ ಅಭ್ಯರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಣೆ ಮಾಡಿ ಇದರಲ್ಲಿ ಅತ್ಯುತ್ತಮವಾಗಿ ಆಟ ಆಡುವ 15 ಜನ ಕ್ರೀಡಾಪಟುಗಳ ಆಯ್ಕೆಯನ್ನು ಅಂತಿಮಗೊಳಿಸಿ ಶಿವಮೊಗ್ಗ ವಲಯಕ್ಕೆ ಸೆಪ್ಟಂಬರ್ 9ರಂದು ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಆಯ್ಕೆದಾರರಾದ ಮೈಸೂರಿನ ಅರ್ಜುನ್ ರಾಜೇಶ್ ಕ್ರಿಕೆಟ್ ಕೋಚ್ ಗಳಾದ ನಟೇಶ್, ಅಕ್ಷಯ್ ಮತ್ತಿತರರಿದ್ದರು.
———————–ವಸಂತ್