ಕೆ.ಆರ್.ಪೇಟೆ: . ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಎಂಇಎಸ್ ಪುಂಡರು ನಡೆಸಿದ ದೌರ್ಜನವನ್ನು ಖಂಡಿಸಿ ಕರವೇ ಸ್ವಾಭಿಮಾನಿ ಸೇನೆಯಿಂದ ಖಂಡನಾ ನಿರ್ಣಯ ಕೈಗೊಳ್ಳುವ ಜೊತೆಗೆ ರಾಜ್ಯದಲ್ಲಿ ಇಂದು ನಡೆಯುತ್ತಿರುವ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಪ್ರವಾಸಿ ಮಂದಿರದ ಆವರಣದಲ್ಲಿ ಧರಣಿ ನಡೆಸಿದವು.
ಕರವೇ ಸ್ವಾಭಿಮಾನಿ ಸೇನೆಯ ಮಂಡ್ತ ಜಿಲ್ಲಾಧ್ಯಕ್ಷ ಅಗ್ರಹಾರಬಾಚಹಳ್ಳಿ ಕಾಂತರಾಜು ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಧರಣಿ ಪ್ರತಿಭಟನಾ ಸಭೆ ನಡೆಸಿ ಮಾತನಾಡಿ ನಮ್ಮ ನಾಡಿನಲ್ಲಿಯೇ ಬದುಕು ಕಟ್ಡಿಕೊಂಡು ನಮ್ಮ ಸರ್ಕಾರಿ ನೌಕಕರ ಮೇಲೆ ಬಬ್ಬಾಳಿಕೆ ಮಾಡಿರುವುದು ಖಂಡನೀಯವಾದುದು .ಇಂತಹ ಸಮಾಜ ದ್ರೋಹಿಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಧರಣಿ ಸತ್ಯಾಗ್ರಹ ಪ್ರತಿಭಟನಾ ಸಭೆಯಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಕೆ.ಆರ್.ಪೇಟೆ ತಾಲೂಕು ಘಟಕದ ಅಧ್ಯಕ್ಷ ಸಮೀರ್, ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ವಕೀಲರಾದ ದೇವಾನಂದ್, ಪ್ರಭಾಕರ್, ಗಿರೀಶ್, ಮಂಜುನಾಥ್, ಮುಖಂಡರಾದ ಕಿರಣ್.ವಿ ದಯಾನಂದ್, ನವೀನ್, ಅಜ್ಜು, ಜಮ್ಮಿಲ್, ಅಂಜಾದ್ ಮುರುಗೇಶ್ ಸೇರಿದಂತೆ ಹಲವಾರು ಪ್ರತಿಭಟನಾಕಾರರು ಧರಣಿ ಸತ್ಯಾಗ್ರಹ ದಲ್ಲಿ ಭಾಗವಹಿಸಿದ್ದರು.
- ಶ್ರೀನಿವಾಸ ಆರ್.