ಚಿಕ್ಕಮಗಳೂರು;ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶೈಕ್ಷಣಿಕ ಸಾಲಿನಲ್ಲಿ 52.13ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮುಖಾಂತರ ನೂತನ ಆಡಳಿತ ಮಂಡಳಿಯೊಂದಿಗೆ ಬೆಳವಣಿಗೆಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ.ಕೇಶವಮೂರ್ತಿ ಹೇಳಿದರು.
ತಾಲ್ಲೂಕಿನ ಹಿರೇಮಗಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023 -24ನೇ ಸಾಲಿನ ಸರ್ವ ಸದಸ್ಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.
ಪ್ರಸ್ತುತ ಸಹಕಾರ ಸಂಘದಿoದ ರೈತಾಪಿ ವರ್ಗಕ್ಕೆ ಸುಮಾರು 6ಕೋಟಿ ರೂ.ಗಳಷ್ಟು ಸಾಲ ವಿತರಿ ಸಲಾಗಿದೆ. 1.20 ಕೋಟಿ ರೂ.ಗಳು ಠೇವಣಿ ಇರಿಸಲಾಗಿದೆ. ಜೊತೆಗೆ ಡಿಸಿಸಿ ಬ್ಯಾಂಕ್‌ನಲ್ಲಿ 33 ಲಕ್ಷ ರೂ.ಗಳ ಷೇರು ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ಸದಸ್ಯರುಗಳು ಆರೋಗ್ಯದ ದೃಷ್ಟಿಯಿಂದ 1060 ಮಂದಿಗೆ ಸಂಘದಿoದ ಯಶಸ್ವಿನಿ ಕಾರ್ಡ್ ಮಾಡಿಸಲಾಗಿದೆ.ಈ ಪೈಕಿ 650 ಮಂದಿ ಯಶಸ್ವಿನಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು ನೂತನ ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಈ ವರ್ಷ ಅತಿಹೆಚ್ಚು ನಿವ್ವಳ ಲಾಭಗಳಿಸಿ ಯ ಶಸ್ವಿಯತ್ತ ಮುನ್ನೆಡೆಯುತ್ತಿದೆ ಎಂದರು.
ಗ್ರಾಮದ ಸರ್ವೆ ನಂ.03ರಲ್ಲಿ 10 ಗುಂಟೆ ಜಾಗವನ್ನು ಸೊಸೈಟಿಗೆ ಹದ್ದುಬಸ್ತಿಗೆ ತೆಗೆದುಕೊಂಡು ಮುಂದೆ ವ್ಯಾಪಾರೀಕರಣಕ್ಕಾಗಿ ಸಭೆಯಲ್ಲಿ ಚರ್ಚಿಸಲಾಗಿದೆ.ಇದು ಹಿಂದಿನ ಪೂರ್ವಜರು ಉಳಿಸಿದಂತ ಆಸ್ತಿಯಾಗಿದ್ದು ಜಾಗದ ಸಂಬoಧ ಈಚೆಗೆ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡು ತಾಲ್ಲೂಕು ಆಡಳಿತ ಹಾಗೂ ಆಯುಕ್ತರು ಡಿಕ್ರಿಗೊಳಿಸಿದೆ. ಮುಂದೆ ಆ ಜಾಗದಲ್ಲಿ ಕಟ್ಟಡ ನಿರ್ಮಿಸುವ ಉದ್ದೇಶವಿದೆ ಎಂದು ಹೇಳಿದರು.
ಸಹಕಾರ ಸಂಘದಲ್ಲಿ ಓರ್ವರು 48 ಲಕ್ಷ ರೂ.ಗಳ ಅವ್ಯವಹಾರ ನಡೆಸಿದ್ದು ಆತನಿಂದ ಹಣವನ್ನು ವಸೂಲಾತಿಗಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಆ ಹಣ ಸಂಘಕ್ಕೆ ಸಂದಾಯಗೊoಡಲ್ಲಿ ಪಿಗ್ನಿ ಠೇವಣಿ ದಾರರಿಗೆ,ಸ್ವಸಹಾಯ ಸಂಘಗಳಿಗೆ ಸಾಲಸೌಲಭ್ಯ ವಿತರಿಸಬಹುದು.2012ರ ಆಡಳಿತ ಮಂಡಳಿ ಸಂಘಕ್ಕೆ 43 ಲಕ್ಷ ತೀರಿಸಲಾಗದೇ ಸಮಸ್ಯೆ ಒಡ್ಡಿತ್ತು. ಇದೀಗ ನೂತನ ಆಡಳಿತ ಮಂಡಳಿ ರಚನೆಗೊಂಡು ನಾಲ್ಕು ವರ್ಷದಲ್ಲೇ ಡಿಸಿಸಿ ಬ್ಯಾಂಕ್ 43 ಲಕ್ಷ ರೂ. ಗಳ ಸಾಲ ವನ್ನು ಬಡ್ಡಿಸಮೇತ ತೀರಿಸಲಾಗಿದೆ.ಇದಕ್ಕೆ ಶಾಸಕರುಗಳಾದ ಸಿ.ಟಿ.ರವಿ ಹಾಗೂ ಹೆಚ್.ಡಿ.ತಮ್ಮಯ್ಯ ಸೇರಿದಂತೆ ಅನೇಕರ ಸಹಕಾರವು ಬಹಳಷ್ಟಿದೆ ಎಂದರು.
ಮಾಜಿ ನಗರಸಭೆ ಸದಸ್ಯ ಹೆಚ್.ಹೆಚ್.ಜಗದೀಶ್ ಮಾತನಾಡಿ ಸಂಘದ ನೂತನ ಅಧ್ಯಕ್ಷ ಕೇಶವ ಮೂರ್ತಿ ನೇತೃತ್ವದಲ್ಲಿ ನಷ್ಟದಲ್ಲಿ ಸಹಕಾರ ಸಂಘವನ್ನು ಬೆಳವಣಿಗೆಯತ್ತ ಕೊಂಡೊಯ್ದಿದಿರುವುದು ಹೆಮ್ಮೆ ಯ ಸಂಗತಿ. ಜೊತೆಗೆ ರೈತರಿಗೆ ಹೊಸ ಸಾಲಸೌಲಭ್ಯ ನೀಡುವ ಚಿಂತನೆ ಸಭೆಯಲ್ಲಿ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿ.ಎಸ್.ಸತೀಶ್, ನೀಲಶೆಟ್ಟಿ, ಎಂ.ಜಗದೀಶ್, ಗಂಗಮ್ಮ, ಹೆಚ್.ಎಂ.ಯೋಗೀಶ್, ಸಿ.ಎಲ್.ಲೋಕೇಶ್, ಹೆಚ್.ಸಿ.ಗಂಗಾಧರ್, ಎಂ.ಎನ್.ಮಲ್ಲುoಡಪ್ಪ, ಕೆ.ಆರ್.ಜಯ ಲಕ್ಷ್ಮಿ , ಮುಖ್ಯ ನಿರ್ವಾಹಕ ಅಧಿಕಾರಿ ಡಿ.ಜಿ.ಅಶ್ರಿಕ್, ಮಾರಾಟ ಗುಮಾಸ್ತ ಜೆ.ಹೆಚ್.ಅನಿಲ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್‌ಕುಮಾರ್ ಹಾಗೂ ಸದಸ್ಯರುಗಳು ಹಾಜರಿದ್ದರು.
——————ಸುರೇಶ್