ಕೆ.ಆರ್.ಪೇಟೆ: ತಾಲ್ಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕೆ.ಎಸ್.ನಂದಿನಿಮಂಜೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಎಂ.ವರಲಕ್ಷ್ಮೀ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಂದಿನಿಮಂಜೇಗೌಡ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನಂದಿನಿ ಮಂಜೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಪಿಡಿಓ ಸುವರ್ಣ, ತಾ.ಪಂ. ವ್ಯವಸ್ಥಾಪಕ ಅನಿಲ್ಬಾಬು ಕಾರ್ಯನಿರ್ವಹಣೆ ಮಾಡಿದರು.

ನೂತನ ಅಧ್ಯಕ್ಷರಾದ ನಂದಿನಿಮಂಜೇಗೌಡ ಅವರು ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರುಗಳಿಗೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಭೂನ್ಯಾಯಮಂಡಳಿ ಸದಸ್ಯರಾದ ಎ.ಆರ್.ನಿಂಗರಾಜು ನೇತೃತ್ವದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನಂದಿನಿ ಮಂಜೇಗೌಡರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಈ ಹಿಂದಿನ ಅಧ್ಯಕ್ಷರಾದ ಎಂ.ವರಲಕ್ಷ್ಮೀ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳಿಸುವ ಮೂಲಕ ನೂತನ ಅಧ್ಯಕ್ಷೆ ನಂದಿನಿ ಮಂಜೇಗೌಡ ಅವರನ್ನು ಆಯ್ಕೆ ಮಾಡಲು ನಿಂಗರಾಜು ಅವರು ಶ್ರಮಿಸಿದ್ದಾರೆ.
ಈ ವೇಳೆ ನೂತನ ಅಧ್ಯಕ್ಷೆ ನಂದಿನಿ ಮಂಜೇಗೌಡ ಅವರನ್ನು ಉಪಾಧ್ಯಕ್ಷೆ ಕಾಮಾಕ್ಷಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಆರ್.ನಿಂಗರಾಜು, ಮಹಾದೇವಿ, ಜಿಎಂ.ವಿಜಯಕುಮಾರ್, ಕೃಷ್ಣಜೋಗಿ, ಎಂ.ಕೆ.ಮೋಹನ್, ಎಲ್.ಎಂ.ಮಹಾದೇವಿ, ಚಿಕ್ಕಮಂದಗೆರೆ ಮಂಜೇಗೌಡ, ಎಂ.ಕೆ.ಮೋಹನ್, ದೊಡ್ಡೇಗೌಡ, ಹೊನ್ನೇನಹಳ್ಳಿ ಲಕ್ಷ್ಮಮ್ಮ, ಕೆ.ಎಸ್.ಜಗದೀಶ್, ಅಶ್ವತ್ಥಾಚಾರ್, ಶ್ರವಣನಹಳ್ಳಿ ಪಲ್ಲವಿ, ಕೆ.ಜೆ,.ಮಂಗಳಾ, ಎಂ.ಕೆ.ಕಾವೇರಿ. ಗ್ರಾ.ಪಂ.ಮಾಜಿ ಅಧ್ಯಕ್ಷ ದೇವರಾಜು, ಮಂದಗೆರೆ ಸೋಸೈಟಿ ಅಧ್ಯಕ್ಷ ವಾಸು, ಮಂಜೇಗೌಡ, ಭಾಸ್ಕರ್, ರಮೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಹೊನ್ನೇನಹಳ್ಳಿ ಮಂಜೇಗೌಡ, ಹೆಚ್.ಜಿ.ಶೇಖರ್, ಹೆಚ್.ಎನ್.ನಿಂಗರಾಜು, ಶಿವುಗೌಡ, ಕುಳ್ಳಪ್ಪನ ನಾಗರಾಜು, ಹೆಚ್.ಕೆ.ಹರೀಶ್, ನಾಗರಾಜು, ಚೆಲುವರಾಜು, ಚುಕ್ಕಮಂದಗೆರೆ ಸುರೇಶ್, ಉಮೇಶ್, ಶ್ರವಣನಹಳ್ಳಿ ಅರುಣ್ಕುಮಾರ್, ಬೇವಿನಹಳ್ಳಿ ಜಗದೀಶ್, ರಾಮಕೃಷ್ಣ, ಮಹೇಂದ್ರ, ದಬ್ಬೇಘಟ್ಟ ಸುರೇಶ್, ಸುಂದರ್, ಗದ್ದೆಹೊಸೂರು ಚಂದ್ರಣ್ಣ, ಮನು, ಕ್ಯಾತನಹಳ್ಳಿ ಸೋಮಶೇಖರ್, ಮಂದಗೆರೆ ಕಾರ್ತಿಕ್, ಮಂಜುನಾಥ್, ಪಟೇಲ್ ರಾಜಣ್ಣ, ಹೊನ್ನೇನಹಳ್ಳಿ ದೇವರಾಜೇಗೌಡ, ಮಂಜು ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದರು.
– ಶ್ರೀನಿವಾಸ್ ಆರ್.