ಕೆ.ಆರ್ ಪೇಟೆ-ಗಂಜಿಗೆರೆ-ಸೊಸೈಟಿಗೆ-ಅಧ್ಯಕ್ಷರಾಗಿ-ಕುರುಬಹಳ್ಳಿ- ನಾಗೇಶ್-ಅವಿರೋಧ-ಆಯ್ಕೆ

ಕೆ.ಆರ್ ಪೇಟೆ: ತಾಲ್ಲೂಕಿನ ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕುರುಬಹಳ್ಳಿ ಕೆ.ಬಿ. ನಾಗೇಶ್ ಮತ್ತು ಉಪಾಧ್ಯಕ್ಷರಾಗಿ ಸುಧಾಮಣಿ ಶಿವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಆಯ್ಕೆ ಬಯಸಿ ಕುರುಬಹಳ್ಳಿ ಕೆ.ಬಿ. ನಾಗೇಶ್ ಉಪಾಧ್ಯಕ್ಷ ಸ್ಥಾನ ಬಯಸಿ ಸುಧಾಮಣಿ ಅವರನ್ನು ಹೊರತು ಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಮಹಮದ್ ಪಾಷಾ, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಸಿದ್ದೇಗೌಡ ಕಾರ್ಯನಿರ್ವಹಣೆ ಮಾಡಿದರು.

ಆಯ್ಕೆಗೊಂಡ ನಂತರ ನೂತನ ಅಧ್ಯಕ್ಷ ಕುರುಬಹಳ್ಳಿ ನಾಗೇಶ್ ಮಾತನಾಡಿ ನನ್ನನ್ನು ಸಂಘದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ನನ್ನ ಎಲ್ಲಾ ನಿರ್ದೇಶಕರಿಗೂ, ಸಂಘದ ವ್ಯಾಪ್ತಿಯ ಎಲ್ಲಾ 24ಗ್ರಾಮಗಳ ಮುಖಂಡರಿಗೂ, ಮತದಾರ ಬಂಧುಗಳಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಅಲ್ಲದೆ ನನ್ನ ಅಧಿಕಾರದ ಅವಧಿಯಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಯ ದಿಕ್ಕಿನತ್ತ ತೆಗೆದುಕೊಂಡು ಹೋಗಲು ಎಲ್ಲಾ ನಿರ್ದೇಶಕರೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಈಗ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರು ಪ್ರಾಮಾಣಿಕವಾಗಿ ಕೆಲಸ ಮಾಡಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಂಘದ ಎಲ್ಲಾ ಶೇರುದಾರರಿಗೆ ಶೂನ್ಯ ಬಡ್ಡಿ ದರದ ಸಾಲವನ್ನು ನೀಡಲು ಕ್ರಮ ವಹಿಸಬೇಕು. ಸಂಘದ ಬ್ಯಾಂಕಿಂಗ್ ಶಾಖೆಯನ್ನು ಇನ್ನೂ ಹೆಚ್ಚಿನ ವಹಿವಾಟು ನಡೆಸಲು ಕ್ರಮ ವಹಿಸಬೇಕು. ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಜನಸಾಮಾನ್ಯರಿಗೆ ಸಂಘದ ಎಲ್ಲಾ ಸೌಲಭ್ಯಗಳನ್ನು ಕೊಡಿಸಿಕೊಡಲು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಶ್ರಮಿಸಬೇಕು ಎಂದರು.

ಸಂಘದ ನೂತನ ನಿರ್ದೇಶಕರಾದ ಪತ್ರ ಬರಹಗಾರ ಮುದುಗೆರೆ ಶಂಕರ್‌ನಾಗ್, ಮಾವಿನಕೆರೆ ಎಂ.ಬಿ.ಗಂಗಾಧರ್, ಹೊಡಕೆಶೆಟ್ಟಿಹಳ್ಳಿ ಆನಂದ್, ಕಟ್ಟಹಳ್ಳಿ ಕೆ.ಎಸ್.ಗಂಗಾಧರ್,ಜಯಮ್ಮದೇವೇಗೌಡ, ಗಂಜಿಗೆರೆ ನಂಜುಂಡಪ್ಪ, ರಾಜ್ಯ ಯುವ ಪ್ರಶಸ್ತಿ ವಿಜೇತ ಚಿಕ್ಕಗಾಡಿಗನಹಳ್ಳಿ ಎನ್.ಪರಮೇಶ್, ಪೂವನಹಳ್ಳಿ ಜವರನಾಯಕ, ಮುದುಗೆರೆ ರಾಮೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಾಯಿತ್ರಿ ರೇವಣ್ಣ ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದುಗೆರೆ ಪರಮೇಶ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಮುಖಂಡರಾದ ಯಗಚಗುಪ್ಪೆ ಎಲ್.ಐ.ಸಿ.ಶಿವಪ್ಪ, ವಿಜಯಕುಮಾರ್, ಚಿಕ್ಕಗಾಡಿಗನಹಳ್ಳಿ ಗ್ರಾ.ಪಂ.ಸದಸ್ಯರಾದ ಗಣೇಶ್, ಶಿವಕುಮಾರ್, ಶೆಟ್ಟಹಳ್ಳಿ ಲೋಕೇಶ್, ಶಿವಯ್ಯ ಸೇರಿದಂತೆ ನೂರಾರು ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?