ಕೆ.ಆರ್.ಪೇಟೆ-ತಾಲ್ಲೂಕಿನ-ಮೋದೂರು-ಗ್ರಾಮದಲ್ಲಿ-75 ಲಕ್ಷ ರೂ ಮತ್ತು-ಹೆತ್ತಗೋನಹಳ್ಳಿ-ಗ್ರಾಮದಲ್ಲಿ-55ಲಕ್ಷ-ರೂಪಾಯಿಗಳ-ವೆಚ್ಚದಲ್ಲಿ ಜಲ ಜೀವನ್-ಮಿಷನ್-ಯೋಜನೆಯ-ಪೈಪ್‌ಲೈನ್ -ಮತ್ತಿತರ ಕಾಮಗಾರಿಗೆ-ಶಾಸಕ-ಹೆಚ್.ಟಿ.ಮಂಜುರಿಂದ-ಭೂಮಿ ಪೂಜೆ

ಕೆ.ಆರ್.ಪೇಟೆ : ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದರಿಂದ ಜಲಮೂಲದಿಂದ ಶುದ್ದ ನೀರು ಪೂರೈಕೆ ಮಾಡಿ ಜನರ ಆರೋಗ್ಯ ಕಾಪಾಡುವ ಯೋಜನೆಯು ವರದಾನವಾದ ಯೋಜನೆಯಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.


ಅವರು ಕೆ.ಆರ್.ಪೇಟೆ ತಾಲ್ಲೂಕಿನ ಮೋದೂರು ಗ್ರಾಮದಲ್ಲಿ 75 ಲಕ್ಷ ರೂ ಮತ್ತು ಹೆತ್ತಗೋನಹಳ್ಳಿ ಗ್ರಾಮದಲ್ಲಿ 55ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಜಲ ಜೀವನ್ ಮಿಷನ್ ಯೋಜನೆಯ ಪೈಪ್‌ಲೈನ್ ಮತ್ತಿತರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.


ಎಲ್ಲಾ ಕಾಯಿಲೆಗಳಿಗೂ ನೀರು ಕಾರಣವಾಗುತ್ತದೆ. ಶುದ್ದ ನೀರು ಸೇವನೆ ಮಾಡುವುದರಿಂದ ಎಲ್ಲಾ ಕಾಯಿಲೆಗಳಿಂದ ದೂರವಿರಬಹುದೆಂಬ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದೀಜಿ ಅವರು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಜಲ ಜೀವನ್ ಮಿಷನ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದಾರೆ.

ಮೋದಿ ಅವರು ಅಧಿಕಾರಕ್ಕೆ ಬಂದ ಕೂಡಲೇ ಸ್ವಚ್ಚ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡಿದರು. ಇದರಿಂದ ದೇಶದ ಕೋಟಿ ಕೋಟಿ ಜನರ ಸ್ವಾಭಿಮಾನದ ಪ್ರಶ್ನೆಯಾಗಿದ್ದ ಬಯಲೇ ಶೌಚಾಲಯ ಆಗಿದ್ದಾಗ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡಿ ಶೌಚಕ್ಕೆಂದು ಬಯಲಿಗೆ ಹೋಗುತ್ತಿದ್ದ ವೇಳೆ ವಿಷಕಾರಿ ಕ್ರಿಮಿ, ಕೀಟಗಳು, ಹಾವು ಹಲ್ಲಿಗಳ ಕಾಟದಿಂದ ಮಹಿಳೆಯರನ್ನು ಹಾಗೂ ಬಡವರನ್ನು ಪಾರು ಮಾಡಿದರು.

ಇಂತಹ ಬಡವರ ಪರವಾದ ಯೋಜನೆಗಳನ್ನು ರೂಪಿಸಿ ಗ್ರಾಮೀಣ ಜನರ ಹಿತ ಕಾಪಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ಕನಿಷ್ಠ ಮೂಲಸೌಕರ್ಯಗಳಾದ ರಸ್ತೆ ಅಭಿವೃದ್ಧಿ, ವಸತಿ ಯೋಜನೆ, ನೀರಾವರಿ ಯೋಜನಾ ಕಾಮಗಾರಿಗಳು, ಗ್ರಾಮಾಭಿವೃದ್ಧಿಗೆ ಅನುಧಾನ ನೀಡದೇ ಶಾಸಕರ ಹಕ್ಕಿಗೆ ಕೊಡಲಿ ಪೆಟ್ಟು ನೀಡುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ದೂರಿದರು.

ಸರ್ಕಾರದ ಈ ಧೋರಣೆ ಹೀಗೆಯೇ ಮುಂದುವರೆದರೆ ಕ್ಷೇತ್ರದ ಜನರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಕಾರ್ಯಕ್ರಮ ರೂಪಿಸಬೇಕಾಗುತ್ತದೆ ಎಂದು ಶಾಸಕರು ಮಾರ್ಮಿಕವಾಗಿ ಹೇಳಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾದ ಇಂಜಿನಿಯರ್ ರವರಾದ ಬಿಂದುಶ್ರೀ, ಪ್ರವೀಣ್, ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಂಪ್ರಸಾದ್, ಗ್ರಾ.ಪಂ.ಸದಸ್ಯರಾದ ಜ್ಯೋತಿ, ಶೋಭ, ಮುಖಂಡರಾದ ಹೆಳವೇಗೌಡ, ಮಲ್ಲೇನಹಳ್ಳಿ ಮೋಹನ್, ಮೋದೂರು ನಾಗರಾಜು, ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಪಿಡಿಓ ವಿನೋದ್, ಕಾರ್ಯದರ್ಶಿ ಜಯರಾಮಾಚಾರಿ, ಗ್ರಾ.ಪಂ.ಸದಸ್ಯ ಹೆತ್ತಗೋನಹಳ್ಳಿ ಮಹೇಶ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

– ಶ್ರೀನಿವಾಸ್‌

Leave a Reply

Your email address will not be published. Required fields are marked *

× How can I help you?