ಕೆ.ಆರ್.ಪೇಟೆ-ಸರ್ಕಾರಿ-ನೌಕರರು-ಏ.14-ರಂದು-ಅಂಬೇಡ್ಕರ್- ಜಯಂತಿಗೆ-ಗೈರು-ಹಾಜರಾದರೇ-ಅಂತಹ-ಇಲಾಖೆಯ-ಅಧಿಕಾರಿಗಳ-ವಿರುದ್ಧ-ಪ್ರತಿಭಟನೆ-ನಡೆಸಲಾಗುವುದು-ದಲಿತ- ಸಂಘಟನೆಗಳ-ಮುಖಂಡರು-ಎಚ್ಚರಿಕೆ

ಕೆ.ಆರ್.ಪೇಟೆ: ಸಾಲು ಸಾಲು ರಜೆ ಇದೆ ಎಂದು ಸರ್ಕಾರಿ ನೌಕರರು ಏ.14 ರಂದು ಅಂಬೇಡ್ಕರ್ ಜಯಂತಿಗೆ ಗೈರು ಹಾಜರಾದರೇ ಅಂತಹ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ನಡೆದ ದಲಿತಪರ ಸಂಘಟನೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್ ಮತ್ತಿತರರು ಏ.12 ಎರಡನೇ ಶನಿವಾರ, ಏ.13‌ ಭಾನುವಾರ, ಏ.14ಅಂಬೇಡ್ಕರ್ ಜಯಂತಿ ರಜೆ ಇದೆ ಎಂದು ರಜೆ ಹಾಕಿ ಅಂಬೇಡ್ಕರ್ ಜಯಂತಿಗೆ ಗೈರು ಹಾಜರಾದರೆ ಅಂತಹ ಇಲಾಖೆಯ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಸಭಾ ಸದಸ್ಯ ಪ್ರೇಮ್‌ಕುಮಾರ್ ಮಾತನಾಡಿ ವಿಶೇಷವಾಗಿ ಮಹಿಳೆಯರು, ಆದಿವಾಸಿಗಳು, ದಲಿತರು,ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕಾರ್ಮಿಕರು,ಅಸ್ಪೃಶ್ಯರ ಉನ್ನತಿಗಾಗಿ ಹಗಲಿರುಳು ದುಡಿದ ಭಾರತೀಯ ಸಂವಿಧಾನದ ಪಿತಾಮಹ ಅಂಬೇಡ್ಕರ್ ಅವರ ಇದೇ ೧೪ ರಂದು ತಾಲ್ಲೂಕು ಆಡಳಿತ ವತಿಯಿಂದ ಆಚರಿಸಲಾಗುವ ಅಂಬೇಡ್ಕರ್ ಜಯಂತಿ ಅಂಗವಾಗಿ ತಾಲ್ಲೂಕಿನ ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು, ಪ್ರಗತಿಪರ ಸಂಘಟನೆಗಳು, ಪಕ್ಷ ಭೇದ, ಜಾತಿ ಭೇದ ಮರೆತು,ಇತರೆ ಸಮುದಾಯದ ಸಂಘಟನೆಗಳು, ಮುಖ್ಯಸ್ಥರು, ಮುಖಂಡರು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೆಪಿಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ದಲಿತ ಮುಖಂಡ ಬಸ್ತಿ ರಂಗಪ್ಪ ಮಾತನಾಡಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಅಂಬೇಡ್ಕರ್ ಭಾವಚಿತ್ರವನ್ನು ವೇದಿಕೆಯ ವರೆಗೆ ಬೆಳ್ಳಿ ಸಾರೋಟಿನಲ್ಲಿ ಜಾನಪದ ಕಲಾಮೇಳಗಳೊಂದಿಗೆ ಮೆರವಣಿಗೆ ಮಾಡಲಾಗುವುದು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡ ಬಸ್ತಿ ರಂಗಪ್ಪ, ನಿವೃತ್ತ ಪ್ರಾಂಶುಪಾಲ ರಾಜಯ್ಯ, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜು, ಸಿಂಧುಘಟ್ಟ ಸೋಮಸುಂದರ್, ಪ್ರಧಾನ ಕಾರ್ಯದರ್ಶಿ ಜೈನ್ನಹಳ್ಳಿ ಹರೀಶ್, ಹಾಸನ-ಮಂಡ್ಯ ಜಿಲ್ಲಾ ಛಲವಾದಿ ಮಹಾಸಭಾ ಉಸ್ತುವಾರಿ ಮಾಂಬಳ್ಳಿ ಜಯರಾಂ, ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ಮುದುಗೆರೆ ಮಹೇಂದ್ರ, ಚೌಡೇನಹಳ್ಳಿ ದೇವರಾಜು, ಕಳ್ಳನಕೆರೆ ಶಂಕರ್, ಗಂಗಾಧರ್, ಬಂಡಿಹೊಳೆ ರಮೇಶ್, ಎನ್.ಜೆ.ಮಂಜು, ಬಂಡಿಹೊಳೆ ಕೃಷ್ಣಮೂರ್ತಿ, ಯೋಗೇಶ್, ರಾಮು, ಹರಿಹರಪುರ ನರಸಿಂಹ, ಬೂಕನಕೆರೆ ತಮ್ಮಯ್ಯ, ನಿಂಗಯ್ಯ, ಬಿಲ್ಲರಾಮನಹಳ್ಳಿ ವಿವೇಕ್ ಮತ್ತಿತರರು ಉಪಸ್ಥಿತರಿದ್ದರು.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?