ಚಿಕ್ಕಮಗಳೂರು, ಮೇ.09:- ತಾಲ್ಲೂಕಿನ ಬೀಕನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶ್ರೀಮತಿ ಲೀಲಾ ಪುಟ್ಟೇಗೌಡ ಎರಡನೇ ಬಾರಿಗೆ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿ.ಪಂ. ಮಾಜಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ ನೂತನ ಅಧ್ಯಕ್ಷರು ಪಂಚಾಯಿತಿ ಕ್ಷೇತ್ರದಲ್ಲಿ ಅಪಾರ ಅನುಭವಗಳಿರುವ ಹಿನ್ನೆಲೆ ಈ ಬಾರಿಯ ಅವಧಿಯಲ್ಲಿ ಅತ್ಯುನ್ನತವಾಗಿ ಅಧಿಕಾರ ನಿಭಾಯಿಸುವರೆಂಬ ವಿಶ್ವಾಸವಿದೆ ಎಂದರು.
ಸರ್ವಸದಸ್ಯರು ಹಾಗೂ ಗ್ರಾಮಸ್ಥರ ಸರ್ವಾನುಮತದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಗ್ರವಾಗಿ ಕಾರ್ಯನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಪ್ರಸ್ತುತ ವಾತಾವ ರಣ ಉಷ್ಣಾಂಶದಿಂದ ಕೂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕುಡಿಯುವ ನೀರಿಗೆ ಕೊಡ ಬೇಕು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಪಿ.ರಾಜೀವ್ ಮಾತನಾಡಿ ಪಂಚಾಯಿತಿಯಲ್ಲಿ ಎರಡನೇ ಭಾರಿಗೆ ಅಧಿಕಾರ ಸ್ವೀಕರಿಸಿರುವ ನೂತನ ಅಧ್ಯಕ್ಷರು ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದು ಉಳಿದ ಅವಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ರೂಪಿಸಲಿದ್ದಾರೆ ಎಂದು ತಿಳಿಸಿದರು.

ನೂತನ ಅಧ್ಯಕ್ಷೆ ಲೀಲಾ ಪುಟ್ಟೇಗೌಡ ಮಾತನಾಡಿ, ಸರ್ವಾನುಮತದಿಂದ ಎರಡನೇ ಬಾರಿಗೆ ಅವಕಾಶ ಕಲ್ಪಿಸಿರುವ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಈ ಹಿಂದಿನ ಅವಧಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಅದೇ ರೀತಿ ಮುಂದಿನ ಅವಧಿಯನ್ನು ಸಮಗ್ರ ಅಭಿವೃಧ್ದಿಗೆ ಮುಡಿ ಪಿಡಲು ಸದಾಸಿದ್ದ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಸೀತಾರಾಮಭರಣ್ಯ, ಸಂತೋಷ್ ಕೋಟ್ಯಾನ್, ಕುರುವಂಗಿ ವೆಂ ಕಟೇಶ್, ಹೆಚ್.ಕೆ.ಕೇಶವಮೂರ್ತಿ, ಗ್ರಾ.ಪಂ. ಉಪಾಧ್ಯಕ್ಷೆ ಭಾಗೀರಥಿ ಜಯಣ್ಣ, ಸದಸ್ಯರಾದ ಹೇಮಾವತಿ ದಿನೇಶ್, ಭಾಗ್ಯಮ್ಮ ಹನುಮಂತಪ್ಪ, ಹೆಚ್.ಪಿ.ಮಂಜೇಗೌಡ, ಬಿ.ಕೆ.ವಿಜಯ್‌ಕುಮಾರ್, ಬಿ.ಎಂ.ಯೋಗೀಶ್, ಪಿಡಿಓ ಪ್ರದೀಫ್‌ಕುಮಾರ್, ಕಾರ್ಯದರ್ಶಿ ಮಂಜಯ್ಯ ಹಾಜರಿದ್ದರು.