ಚಿಕ್ಕಮಗಳೂರು-ರೈತರ-ಸಂಕಷ್ಟಗಳಿಗೆ-ಕೃಷಿ-ಪತ್ತಿನ-ಸಂಘ ನೆರವಾಗಲಿ-ಭದ್ರಾ-ಕಾಡ-ಅಧ್ಯಕ್ಷ-ಅಂಶುಮಂತ್


ಚಿಕ್ಕಮಗಳೂರು – ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ಸಮಯಕ್ಕೆ ಸರಿ ಯಾಗಿ ಗೊಬ್ಬರ, ಭಿತ್ತನೆ ಬೀಜ ಒದಗಿಸುವ ಮೂಲಕ ಭೂಮಿಯನ್ನು ಫಲವತ್ತತೆಯಿಂದ ಕೂಡಿರುವ ಸಹ ಕಾರಿ ಸಂಘವು ಮುಂದಾಗಬೇಕು ಎಂದು ಭದ್ರಾ ಕಾಡ ಅಧ್ಯಕ್ಷ ಡಾ|| ಕೆ.ಪಿ.ಅಂಶುಮಂತ್ ಹೇಳಿದರು.


ತಾಲ್ಲೂಕಿನ ಹಿರೇಮಗಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಜೆ.ಪರಮೇಶ್ವರ್ ಹಾಗೂ ಉಪಾಧ್ಯಕ್ಷರಾಗಿ ಕೆ.ಎಂ.ಲೋಹಿತೇಶ್ ಬುಧವಾರ ಅವಿರೋಧ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.


ಸಹಕಾರ ಸಂಘದ ಪದಾಧಿಕಾರಿಗಳು ಸಹಕಾರಿ ತತ್ವವನ್ನು ಮೈಗೂಡಿಸಿಕೊಳ್ಳಬೇಕು. ಸಿಕ್ಕಂತ ಅವಕಾಶ ವನ್ನು ಸದಸ್ಯರು ಹಾಗೂ ರೈತರಿಗೆ ವಿನಿಯೋಗಿಸಲು ಬಳಸಿಕೊಳ್ಳಬೇಕು ಎಂದ ಅವರು ಸಮರ್ಪಕ ರೀತಿ ಯಲ್ಲಿ ಕಾರ್ಯನಿರ್ವಹಿಸಿದರೆ ರೈತರು ಹಾಗೂ ಸಂಘವು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದರು.


ರೈತರ ಬೆಳೆಗೆ ಪೂರಕವಾಗಲು ಡಿಸಿಸಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಹಾಗೂ ಸರ್ಕಾರದ ಸವಲತ್ತು ಒದಗಿಸಲು ಮುಂದಾಗಬೇಕು. ಕ್ಷೇತ್ರದ ಶಾಸಕರ ತವರುರಾದ ಹಿರೇಮಗಳೂರಿಗೆ ಎಲ್ಲೂ ಚ್ಯುತಿ ಬಾರದಂತೆ ನಿಗಾವಹಿಸಿ ಸಹಕಾರಿ ಸಂಘವು ರೈತರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.


ಪ್ರಸ್ತುತ ಹಿರೇಮಗಳೂರು ಸಹಕಾರಿ ಸಂಘವು ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದೆ. ಹೀಗಾಗಿ ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಅತ್ಯಧಿಕ ಸ್ಥಾನಗಳನ್ನು ಗಳಿಸುವಲ್ಲಿ ಮುಂದಾಗಿದ್ದು ಸಂಘದ ಪದಾಧಿಕಾರಿಗಳು ಬೆಂಬಲದೊಂದಿಗೆ ಜಿಲ್ಲೆಯಾದ್ಯಂತ ಗಟ್ಟಿಹೆಜ್ಜೆ ಇಟ್ಟು ಮುನ್ನೆಡೆಯುತ್ತೇವೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಸಹಕಾರಿ ಸಂಘವು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಕಚೇರಿಗೆ ಆಗಮಿಸುವಂಥ ರೈತರು, ಸದಸ್ಯರಿಗೆ ಸಕಾತ್ಮಕವಾಗಿ ಸ್ಪಂದಿಸಿ ಸೌಲಭ್ಯ ಒದಗಿಸುವಲ್ಲಿ ಮುಂದಾದರೆ ಸ್ಥಾನವನ್ನು ಅಲಂಕರಿಸುವುದು ಸಾರ್ಥಕ ಎಂದು ತಿಳಿಸಿದರು.

ಪ್ರಸ್ತುತ ಹಿರೇಮಗಳೂರು ಸಂಘವು ಕಾಂಗ್ರೆಸ್ ಬೆಂಬಲಿತದಿಂದ ಹೆಚ್ಚಿನ ಸ್ಥಾನ ಪಡೆದುಕೊಂಡು ಅಧಿಕಾರ ಚುಕ್ಕಾಣಿ ಹಿಡಿದಿರುವುದು ಸಂತಸದ ಸಂಗತಿ. ಆ ನಿಟ್ಟಿನಲ್ಲಿ ಸೊಸೈಟಿಯ ಆಗಮಿಸುವಂಥ ಪ್ರತಿಯೊಬ್ಬರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸಂಘದಿಂದಾಗುವ ಸೌಕರ್ಯವನ್ನು ಪೂರೈಸಿಕೊಡಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷ ಹೆಚ್.ಜೆ.ಪರಮೇಶ್ವರ್ ಮಾತನಾಡಿ, ಸಹಕಾರ ಸಂಘದಲ್ಲಿ ಮೊದಲು ಗುಮಾಸ್ತನಾಗಿ ಕಾರ್ಯನಿರ್ವಹಿಸಿ ಇದೀಗ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಕಾಂಗ್ರೆಸ್ ಮುಖಂಡರುಗಳು ಹಾಗೂ ಕ್ಷೇತ್ರದ ಶಾಸಕರ ಬೆಂಬಲವೇ ಕಾರಣ. ಹಾಗಾಗಿ ಸರ್ವ ನಿರ್ದೇಶಕರುಗಳ ಸಹಕಾರಿಂದ ಮುಂದೆ ಸಂಘವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ. ಸಿ.ಶಿವಾನಂದಸ್ವಾಮಿ, ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ರಾಮಚಂದ್ರ, ಸಿಡಿಎ ನಾಮಿನಿ ಸದಸ್ಯ ರಾಘವೇಂದ್ರ, ಆಶಾ ಬಸವರಾಜ್, ನಿರ್ದೇಶಕರುಗಳಾದ ಎಂ.ಜಗದೀಶ್, ನೀಲಶೆಟ್ಟಿ, ಹೆಚ್.ವಿ.ಅಶೋಕ್, ಕೆ.ಆರ್. ಆನಂದ್‌ ರಾಜ್ ಅರಸ್, ಎಲ್.ಜೆ.ಮೋಹನ್, ತಮ್ಮೇಗೌಡ, ಚಂದ್ರಕಲಾ, ಪ್ರೇಮ, ಹೆಚ್.ಜೆ.ಸಚಿನ್, ಮುಖಂಡರು ಗಳಾದ ಜಗದೀಶ್, ಚುನಾವಣಾಧಿಕಾರಿ ಮಹಾಂತೇಶ್ ಮತ್ತಿತರರಿದ್ದರು.

  • ಸುರೇಶ್ ಎನ್ , ಚಿಕ್ಕಮಗಳೂರು

Leave a Reply

Your email address will not be published. Required fields are marked *

× How can I help you?