ಕೆ.ಆರ್.ಪೇಟೆ-ಆಲಂಬಾಡಿ-ಕಾವಲು-ಪ್ರಾಥಮಿಕ-ಕೃಷಿ-ಪತ್ತಿನ- ಸಹಕಾರ-ಸಂಘದ-ನೂತನ-ಅಧ್ಯಕ್ಷರಾಗಿ-ಎಂ.ಮೋಹನ್-ಅವಿರೋಧ-ಆಯ್ಕೆ

ಕೆ.ಆರ್.ಪೇಟೆ: ತಾಲ್ಲೂಕಿನ ಆಲಂಬಾಡಿಕಾವಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸ್ವಾಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಮೋಹನ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸ್ವಾಭಿಮಾನಿ ಬಳಗ ಬೆಂಬಲಿತ ಅಭ್ಯರ್ಥಿ ಜವರಮ್ಮ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಬಯಸಿ ಎಂ.ಮೋಹನ್, ಉಪಾಧ್ಯಕ್ಷ ಸ್ಥಾನ ಬಯಸಿ ಜವರಮ್ಮ ಹೊರತು ಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷ ಎಂ.ಮೋಹನ್ ಮತ್ತು ಉಪಾಧ್ಯಕ್ಷೆ ಜವರಮ್ಮ ಅವರನ್ನು ಅಭಿನಂದಿಸಿ ಮಾತನಾಡಿದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಅವರು ನಮ್ಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ ಸ್ವಾಭಿಮಾನಿ ಬಳಗದ ಅಭ್ಯರ್ಥಿಯಾದ ಎಂ.ಮೋಹನ್ ಅವರು ಉತ್ಸಾಹಿ ಯುವಕ, ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಅಧ್ಯಕ್ಷ ಬಿ.ಮೋಹನ್ ಮತ್ತು ಉಪಾಧ್ಯಕ್ಷೆ ಜವರಮ್ಮ ಅವರು ಸಂಘದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಈ ಮೂಲಕ ಮತದಾರರು ನಮ್ಮ ಸ್ವಾಭಿಮಾನಿ ಬಳಗದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ಅವರು ಮಾತನಾಡಿ, ನಮ್ಮ ಸ್ವಾಭಿಮಾನಿ ಬಳಗದ ಅದ್ಭುತ ಗೆಲುವಿಗೆ ನಮ್ಮ ಸೊಸೈಟಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮತದಾರರು, ಮುಖಂಡರು ಕಾರಣರಾಗಿದ್ದಾರೆ. ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.

ಈ ಗೆಲುವು ನಮ್ಮ ಸ್ವಾಭಿಮಾನಿ ಬಳಗದ ಸಮಸ್ತ ಸದಸ್ಯರಿಗೆ ಸಲ್ಲುತ್ತದೆ. ಈಗ ನೂತನವಾಗಿ ಆಯ್ಕೆಯಾಗಿರುವ ಆಡಳಿತ ಮಂಡಳಿಯ ಅಧ್ಯಕ್ಷರು- ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಸಂಘದ ಅಭಿವೃದ್ದಿಗೆ ಐದು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿ ಈ ಮೂಲಕ ಸಂಘದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ನೂತನ ಅಧ್ಯಕ್ಷ ಎಂ.ಮೋಹನ್ ಮಾತನಾಡಿ, ನಾನು ಅಧ್ಯಕ್ಷನಾಗಿ ಆಯ್ಕೆಯಾಗಲು ನಮ್ಮ ಸ್ವಾಭಿಮಾನಿ ಬಳಗದ ಸಂಸ್ಥಾಪಕರಾದ ಬಿ.ನಾಗೇಂದ್ರಕುಮಾರ್ ಹಾಗೂ ಎ.ಎಂ.ಸಂಜೀವಪ್ಪ ಅವರುಗಳು ಪ್ರಮುಖ ಕಾರಣಕರ್ತರಾಗಿದ್ದಾರೆ. ಜೊತೆಗೆ ಎಲ್ಲಾ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಲು ಸಹಕಾರಿಯಾಯಿತು.

ಎಲ್ಲರಿಗೂ ನಾನು ಆಭಾರಿಯಾಗಿರುತ್ತೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ನಮ್ಮ ಸೊಸೈಟಿಯ ಸಮಗ್ರ. ಅಭಿವೃದ್ದಿಗೆ ಅರ್ಪಣಾ ಭಾವನೆಯಿಂದ ಕೆಲಸ ಮಾಡಿ ನನ್ನ ಮೇಲೆ ತಾವು ಎಲ್ಲರೂ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ನೂತನ ಅಧ್ಯಕ್ಷರು- ಉಪಾಧ್ಯಕ್ಷರನ್ನು ಜಿ.ಪಂ.ಮಾಜಿ ಸದಸ್ಯ ಐಪನಹಳ್ಳಿ ನಾಗೇಂದ್ರಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಎಂ.ಸಂಜೀವಪ್ಪ, ನಿರ್ದೇಶಕರಾದ ಎ.ಟಿ.ಕರಿಶೆಟ್ಟಿ, ಗುಡುಗನಹಳ್ಳಿ ಸುದರ್ಶನ್, ರಾಜು.ಎಸ್, ಪಿ.ನಂಜುಂಡೇಗೌಡ, ಕೃಷ್ಣಯ್ಯ, ಭಾಗ್ಯಮ್ಮ, ಗ್ರಾ.ಪಂ.ಅಧ್ಯಕ್ಷ ವೆಂಕಟೇಶ್, ತಾ.ಪಂ.ಮಾಜಿ ಸದಸ್ಯ ನಂಜುಂಡೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಿವಾಕರ್.ಕೆ.ಮಾಸ್ತೀಗೌಡ, ಗ್ರಾ.ಪಂ.ಸದಸ್ಯ ರವಿಕುಮಾರ್, ನಿವೃತ್ತ ಪಶುವೈದ್ಯ ಡಾ.ಬಸವರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಕರಿಶೆಟ್ಟಿ, ಮಾವಿನಕೆರೆ ಪ್ರಕಾಶ್, ಐಪನಹಳ್ಳಿ ಬೀರೇಶ್ ಬಾಬು, ದಸ್ತಗೀರ್‌ಪಾಷಾ, ರಫಿಕ್, ಬಿಜೆಪಿ ಮೂರ್ತಿ, ಪವಿತ್ರ ಡಿಜಿಟಲ್ ಸ್ಟುಡಿಯೋ ಪ್ರಮೋದ್‌ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಅಭಿನಂದಿಸಿದರು.


ಚುನಾವಣಾಧಿಕಾರಿಯಾಗಿ ವಾಸಿಂ ಪಾಷಾ ಕಾರ್ಯನಿರ್ವಹಣೆ ಮಾಡಿದರು. ಕಳೆದ ಮಾ.09ರಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎ.ಎಂ.ಸಂಜೀವಪ್ಪ ನೇತೃತ್ವದ ಸ್ವಾಭಿಮಾನಿ ಬಳಗ ಬೆಂಬಲಿತರು 8 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆರ್.ಟಿ.ಓ.ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ನಾಲ್ಕು ಮಂದಿ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದರು.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?