ಕೊರಟಗೆರೆ:- ಇತ್ತೀಚೆಗೆ ತಾಲ್ಲೂಕಿನಲ್ಲಿ ಬೆಂಕಿ ಅವಗಡದಿಂದ ಗುಡಿಸಲು, ಮೇಕೆ ಮತ್ತು ದವಸಧಾನ್ಯ ಸುಟ್ಟು ಹೋಗಿದ್ದ ಎರಡು ಬಡ ಕುಟುಂಬಗಳಿಗೆ ಎಂ.ಎನ್.ಜೆ.ಮಂಜುನಾಥ್ ಸಹಾಯ ಹಸ್ತ ನೀಡಿದರು.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬಿ.ಡಿ.ಪುರ ಗ್ರಾಮದ ವಾಸಿಗಳಾದ ಗಂಗಮ್ಮ, ಶಿಲ್ಪ ರವರ ಗುಡಿಸಿಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗುಡಿಸಲು ಹಾಗೂ ಅಲ್ಲಿದ್ದ 5 ಮೇಕೆಗಳು ಸುಟ್ಟು ಹೋಗಿದ್ದವು, ಗುಡಿಸಿನಲ್ಲಿದ್ದ ಶಿಲ್ಪ ಮತ್ತು ಗಂಗಮ್ಮನವರಿಗೆ ಸುಟ್ಟ ಗಾಯಗಳಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು, ಇದರೊಂದಿಗೆ ತಾಲ್ಲೂಕಿನ ಕಸಬ ಹೋಬಳಿಯ ದಿನ್ನೆಪಾಳ್ಯ ಗ್ರಾಮದ ರೈತ ತಿಮ್ಮಯ್ಯ ನವರ ಮನೆಯಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್‌ಯಿಂದ ಮನೆಯಲ್ಲಿ ಇದ್ದ ದವಸದಾನ್ಯಗಳ ಮೂಟೆಗಳು ಸುಟ್ಟು ಕರಕಲಾಗಿದ್ದವು.

ಈ ಎರಡು ಕುಟುಂಬಗಳು ಸಂಕಷ್ಟದಲ್ಲಿದ್ದುದ್ದನ್ನು ಪತ್ರಿಕೆ ಮೂಲಕ ವಿಷಯ ತಿಳಿದುಕೊಂಡ ಕೊರಟಗೆರೆ ಕ್ಷೇತ್ರದ ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಎನ್.ಜೆ.ಮಂಜುನಾಥ್ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಇದ್ದ ಗಂಗಮ್ಮ, ಶಿಲ್ಪ ಹಾಗೂ ಮನೆಯಲ್ಲಿದ್ದ ತಿಮ್ಮಯ್ಯ ರವರ ಕುಟುಂಬಗಳಿಗೆ ಸಾಂತ್ವಾನ ಹೇಳಿ ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಸದಾ ನಿಮ್ಮ ಜೊತೆ ಇರುತ್ತಾರೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನಾವುಗಳೂ ಸಹ ನಿಮ್ಮಗಳ ಜೊತೆ ಇರುತ್ತೇವೆ ಎಂದು ದೈರ್ಯ ತುಂಬಿ ೨ ಕುಟುಂಬಕ್ಕೂ ತಲಾ 30 ಸಾವಿರ ರೂ ಗಳ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ವೈದ್ಯ ಡಾ.ಪುರುಷೋತ್ತಮನಾಯಕ್, ಗ್ರಾ.ಪಂ. ಅದ್ಯಕ್ಷ ಬೀಮರಾಜು, ಮಾಜಿ ತಾ.ಪಂ. ಸದಸ್ಯ ರವಿಕುಮಾರ್ ಮುಖಂಡರುಗಳಾದ ಮಾವತ್ತೂರು ಕುಮಾರ್, ಬಿ.ಡಿ.ಪುರ ಸುರೇಶ್, ಕೇಬಲ್ ಸಿದ್ದಗಂಗಯ್ಯ, ಅಶ್ವತ್ಥಪ್ಪ, ಲಕ್ಷ್ಮಿ ಪತಿ ಸೇರಿದಂತೆ ಇತರರು ಹಾಜರಿದ್ದರು.
- ಶ್ರೀನಿವಾಸ್ ಕೊರಟಗೆರೆ