ಮಧುಗಿರಿ-ಮಿಡಗೇಶಿಯ ವಿವಿಧ ಕಾಲೇಜುಗಳ ಎನ್.ಎಸ್.ಎಸ್ ವಿದ್ಯಾರ್ಥಿಗಳು ಮತ್ತು ಚಿರ ಜೀವನ ನೆಟ್ವರ್ಕ್ ಸಿಬ್ಬಂದಿ ವರ್ಗದವರು ಬೀದಿ ನಾಟಕ ನಡೆಸಿಕೊಡುವುದರ ಮೂಲಕ ಸಾರ್ವಜನಿಕರಲ್ಲಿ ಏಡ್ಸ್ ಬಗೆಗೆ ಜಾಗ್ರತಿ ಮೂಡಿಸಿದರು.
ಪಟ್ಟಣದ ಡೊಮ್ ಲೈಟ್ ಸರ್ಕಲ್,ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್,ತಾಲೂಕ ಕಚೇರಿ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಣಿ ಬೀದಿ ನಾಟಕ ಮಾಡುವ ಮೂಲಕ ಸಾರ್ವಜನಿಕರಲ್ಲಿ ಹೆಚ್ ಐ ವಿ ಸೋಂಕಿನ ಬಗ್ಗೆ ಅರಿವು ತುಂಬಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶ್ರೀನಿವಾಸ್, ಆಪ್ತ ಸಮಾಲೋಚಕರಾದ ಸುಮಾ ಮಣಿ ಡಿ ಎಸ್,ಶಶ್ರೂಕರಾದ ರಾಧಾಕೃಷ್ಣ, ಮೋಹನ್ ಕುಮಾರ್ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಧರಣೇಶ್ ಗೌಡ,ಸುರೇಶ್,ಮಿಡಿಗೇಶಿ ಪ್ರಾಂಶುಪಾಲರಾದ ಡಾಕ್ಟರ್ ನಾಗಭೂಷಣ್,ಎನ್ ಎಸ್ ಎಸ್ ಅಧಿಕಾರಿಗಳಾದ ಡಾ. ಮಂಜು ಭಾರ್ಗವಿ, ಎನ್ ಎಸ್ ಎಸ್ ವಿದ್ಯಾರ್ಥಿಗಳು ಮತ್ತು ಚಿರ ಜೀವನ ನೆಟ್ವರ್ಕ್ ರವಿ ಹಾಜರಿದ್ದರು.
————-ಪ್ರದೀಪ್ ಮಧುಗಿರಿ