ಮಧುಗಿರಿ:ಅಭಕಾರಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.ತಿಂಗಳೂರು ಗ್ರಾಮದ ಮೂಲಕ ಅಕ್ರಮ ಶೇಂದಿ ಬರುತ್ತಿದೆ ಎಂಬ ಖಚಿತ ಮಾಹಿತಿಯನ್ನು ಪಡೆದುಕೊಂಡ ಅಬಕಾರಿ ನಿರೀಕ್ಷಕ ರಾಮಮೂರ್ತಿಯವರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಭರ್ತಿ ೫೦೦ ಲೀಟರು ಅಕ್ರಮ ಶೇಂದಿಯನ್ನು ವಶಪಡಿಸಿಕೊಳ್ಳುವುದರ ಜೊತೆಗೆ,ಸಾಗಿಸಲು ಬಳಸಿಕೊಂಡಿದ್ದ ಆಟೋವನ್ನು ಸಹ ಸೀಜ್ ಮಾಡಿದ್ದಾರೆ.
ತಾಲೂಕಿನಾದ್ಯಂತ ಅಕ್ರಮ ಶೇಂದಿಯ ಘಾಟು ಜೋರಾಗಿ ಹೊಡೆಯುತ್ತಿದೆಯೆಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಮಮೂರ್ತಿಯವರು ಮಾಹಿತಿ ಕಲೆಹಾಕತೊಡಗಿದ್ದರು.
ತಿಂಗಳೂರು ಗ್ರಾಮಕ್ಕೆ ಶೇಂದಿ ಗಾಡಿ ಬಂದಿದೆ ಎಂಬ ಖಚಿತ ಮಾಹಿತಿ ಪಡೆದುಕೊಂಡ ಅವರು,ತಮ್ಮ ಸಿಬ್ಬಂದಿಗಳಾದ ಉಪ ನಿರೀಕ್ಷಕ ಮನು,ಸಿಬ್ಬಂದಿಗಳಾದ ಶರಣಪ್ಪ,ಖಾನ್ ಹಾಗು ರಮೇಶ್ ರೊಂದಿಗೆ ದಿಢೀರ್ ದಾಳಿ ನಡೆಸಿ ಐವತ್ತು ಸಾವಿರ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಶೇಂದಿಯನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ಪರಾರಿಯಾಗಿದ್ದು ಕೇಸು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಸೀಮಾಂಧ್ರ ಪ್ರದೇಶದ ಕಾಡಪಲ್ಲಿ ಗ್ರಾಮದಿಂದ ಕೊಡಿಗೇನಹಳ್ಳಿ,ಗೌರಿಬಿದನೂರು ಮೂಲಕ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಅಕ್ರಮ ಶೇಂದಿಯನ್ನು ದಂದೆಕೋರರು ತರಿಸುತ್ತಿದ್ದಾರೆ.
ಈ ದಾಳಿಯಿಂದ ಮಧುಗಿರಿ ತಾಲೂಕಿನ ಕಾಳದಂಧೇಕೋರರಿಗೆ ನಡುಕ ಪ್ರಾರಂಭವಾಗಿದ್ದು ಅಭಕಾರಿ ಪೊಲೀಸರು ಇನ್ನು ಹೆಚ್ಚಿನ ದಾಳಿಗಳ ಸಂಘಟಿಸುವ ಮೂಲಕ ಅಕ್ರಮ ಶೇಂದಿ ದಂದೆಕೋರರ ಸೊಂಟ ಮುರಿಯುತ್ತಾರಾ ಕಾದುನೋಡಬೇಕಾಗಿದೆ.
—————–ಪ್ರದೀಪ್ ಮಧುಗಿರಿ