ಮಧುಗಿರಿ-ಬೆ.ವಿ.ಕಂ[ಬೆಸ್ಕಾಂ] ವಿಭಾಗ ಕಛೇರಿಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣನವರು ನೆರವೇರಿಸಿದರು.
ಕಟ್ಟಡದ ಕಾಮಗಾರಿಯು ಅತೀ ಶೀಘ್ರದಲ್ಲಿ,ಗುಣಮಟ್ಟದೊಂದಿಗೆ ಮುಗಿಯಬೇಕು ಎಂದು ಅವರು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಬೆ. ವಿ. ಕಂ.ಯ ವಿಭಾಗೀಯ ಕಾರ್ಯ ನಿರ್ವಾಹಕ ಇಂಜಿನಿಯರ್ ಜಿ. ಜಗಧೀಶ್,ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್,ಮಾಯಕಣ್ಣ ನಾಯ್ಕ್,ಶ್ರೀನಿವಾಸ್ ,ಎಲ್ಲಾ ಬೆ. ವಿ. ಕಂ.ಯ ಸಿಬ್ಬಂದಿ ವರ್ಗದವರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿದ್ಯುತ್ ಗುತ್ತಿಗೆದಾರರು ಪಾಲ್ಗೊಂಡಿದ್ದರು.
———ಈರಣ್ಣ. ಎ,ಮಧುಗಿರಿ