ಮಧುಗಿರಿ- ಧಾರ್ಮಿಕ ಸಾಮರಸ್ಯ ವನ್ನು ಎತ್ತಿ ಹಿಡಿದ ಚಿರೆಕ್ ಶಾಲೆ

ಮಧುಗಿರಿ- ಭಾರತದ ವಿಭಿನ್ನ ಸಂಸ್ಕೃತಿ ಮತ್ತು ಧಾರ್ಮಿಕ ವೈವಿದ್ಯತೆಯನ್ನು ಮಕ್ಕಳಿಗೆ ಪರಿಚಯಿಸುವ ಸಲುವಾಗಿ ಎಲ್ಲಾ ಧಾರ್ಮಿಕ ಹಬ್ಬಗಳ ಆಚರಣೆಯನ್ನು ಪ್ರಾತ್ಯಕ್ಷಿಕ ವಾಗಿ ಮಾಡುವ ಮೂಲಕ ಚರೆಕ್ ಶಾಲೆಯು ವಿಭಿನ್ನತೆಯನ್ನು ಮೆರೆದಿದೆ.

ಮುಸ್ಲಿಂ ಸಮುದಾಯದ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ಬೆಳಗಿನ ವೇದಿಕೆ ಕಾರ್ಯಕ್ರಮದಲ್ಲಿ ಆಚರಿಸಿ ಹಬ್ಬದ ವಿಧಿ-ವಿಧಾನ, ಮಹತ್ವ ಮತ್ತು ಸಂದೇಶವನ್ನು ಮಕ್ಕಳಿಗೆ ಪರಿಚಯಿಸಲಾಯಿತು.

ಈ ಸಂದರ್ಭದಲ್ಲಿ ಮಕ್ಕಳಿಂದ ಕುರ್ ಆನ್ ಶ್ಲೋಕ ಪಠಣೆ ಮತ್ತು ದೈವಗಾಯನಗಳು ನಡೆದವು.

ಮೆಕ್ಕಾ ನಗರದ ಕಾಬಾ ಮಾದರಿಗೆ ಪುಷ್ಪ ಸಮರ್ಪಣೆ ಮಾಡುವ ಮೂಲಕ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಭಾಸ್ಕರ್ ರೆಡ್ಡಿ ಸರ್, ಪ್ರಾಂಶುಪಾಲರಾದ ಶ್ರೀಮತಿ ಶೈಲಶ್ರೀ ಮೇಡಂ, ಮುಖ್ಯಶಿಕ್ಷಕರಾದ ರಾಘವೇಂದ್ರ ರವರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *