ಮಧುಗಿರಿ-ಮಧುಗಿರಿ-ಪಾವಗಡ ಹೀದರಿಯಲ್ಲಿ ಬಸವನಹಳ್ಳಿ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಜೀವ ಕೈಯ್ಯಲ್ಲಿ ಹಿಡಿದು ಸವಾರಿ ಮಾಡಬೇಕಾದ ಪರಿಸ್ಥಿತಿ ಇದೆ.
ಅತ್ಯಂತ ವಾಹನ ದಟ್ಟಣೆಯಿರುವ ಈ ರಸ್ತೆ ಕೆಟ್ಟುಹೋಗಿ ಹಲವು ವರ್ಷಗಳೇ ಕಳೆದಿವೆ.ಪ್ರತಿದಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದೆ ರಸ್ತೆಯಲ್ಲಿ ಸಂಚರಿಸುತ್ತಾರಾದರು ಈ ರಸ್ತೆಯನ್ನು ಸರಿಪಡಿಸುವ ಪ್ರಯತ್ನವನ್ನು ಮಾಡುತ್ತಿಲ್ಲ.
ಪ್ರತಿ ದಿನ ರಸ್ತೆಗುಂಡಿಗಳ ಕಾರಣಕ್ಕೆ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದ್ದು ಬಡ ಜನ ಆಸ್ಪತ್ರೆ ಸೇರುತ್ತಿದ್ದಾರೆ.
ಇನ್ನು ಆಸ್ಪತ್ರೆಗಳಿಗೆ ಸಂಚರಿಸುವ ಗರ್ಭಿಣಿ ಮಹಿಳೆಯರ ಪಾಡಂತೂ ಹೇಳತೀರದಾಗಿದೆ. ಎಷ್ಟೋ ಜನ ಗರ್ಭಿಣಿ ಸ್ತ್ರೀಯರಿಗೆ ಈ ರಸ್ತೆಯ ಕಾರಣಕ್ಕೆ ಹೆರಿಗೆ ದಿನಾಂಕ ಪೂರ್ವ ಪ್ರಸವಗಳಾಗಿವೆ ಎನ್ನುವ ಆರೋಪಗಳಿದ್ದು,ಜನರಿಂದ ಅಧಿಕಾರದ ಗದ್ದುಗೆಗೆ ಏರಿ ಅವರಿಗೊಂದು ಸರಿಯಾದ ರಸ್ತೆ ಕೊಡದ ರಾಜಕಾರಣಿಗಳಿಗೆ ಸಾರ್ವಜನಿಕರು ದಿಕ್ಕಾರ ಹಾಕಿದ್ದಾರೆ.
ಇನ್ನು ಮುಂದಾದರು ಸಂಬಂಧಪಟ್ಟ ಸಚಿವರು,ಅಧಿಕಾರಿಗಳು ಈ ರಸ್ತೆಯ ಗುಂಡಿಗಳನ್ನು ಮುಚ್ಚಿ ಜನಸಾಮಾನ್ಯರ ಕಣ್ಣೀರು ಒರೆಸುವ ಕೆಲಸಕ್ಕೆ ಮುಂದಾಗುತ್ತಾರಾ ಕಾದುನೋಡಬೇಕಾಗಿದೆ.
——–ಈರಣ್ಣ ಮಧುಗಿರಿ