ಮಾಗಡಿ-ಜೈವಿಕ ಇಂಧನಕ್ಕೆ ಸೂಕ್ತವಾದ ಗಿಡ-ಮರಗಳಾದ ಹೊಂಗೆ,ಸುರಹೊನ್ನೆ,ಹಿಪ್ಪೆ ಮುಂತಾದವುಗಳನ್ನು ನಮ್ಮ ಜಮೀನಿನಲ್ಲಿ ನೆಡಬೇಕು-ಡಾ.ಮುತ್ತುರಾಜು

ಮಾಗಡಿ:ಜೈವಿಕ ಇಂಧನ ನಡೆತೋಪು ಕಾರ್ಯಕ್ರಮವನ್ನು ಹೋಂಡಾ ಟ್ರೇಡಿಂಗ್ ಕಾರ್ಪೋರೇಶನ್ ಪ್ರೈ.ಲಿ. ಮತ್ತು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಜೈವಿಕ ಇಂದನ ಘಟಕ ವಿಭಾಗ ಇವರ ಸಹಯೋಗದೊಂದಿಗೆ ಮಾಗಡಿ ತಾಲ್ಲೂಕಿನ ಹುಚ್ಚಹನುಮೇಗೌಡನಪಾಳ್ಯ ಹಳ್ಳಿಯಲ್ಲಿ ಆಯೋಜಿಸಲಾಗಿತ್ತು.

ಕೃಷಿ ವಿಶ್ವವಿದ್ಯಾಲನಿಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಮುತ್ತುರಾಜು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಲತಾ ಅವರು ವಿಶೇಷ ಶಿಬಿರದಲ್ಲಿ ಮಾತನಾಡುತ್ತಾ,ಮುಂದಿನ ಭವಿಷ್ಯದ ದಿನಗಳಲ್ಲಿ ಇಂಧನ ಕೊರತೆಯನ್ನು ಎದುರಿಸುವಲ್ಲಿ ಜೈವಿಕ ಇಂಧನದ ಪ್ರಾಮುಖ್ಯತೆ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿದರು.

ನಾವೆಲ್ಲರೂ ಒಟ್ಟುಗೂಡಿ ಜೈವಿಕ ಇಂಧನಕ್ಕೆ ಸೂಕ್ತವಾದ ಗಿಡ-ಮರಗಳಾದ ಹೊಂಗೆ,ಸುರಹೊನ್ನೆ,ಹಿಪ್ಪೆ ಮುಂತಾದವುಗಳನ್ನು ನಮ್ಮ ಜಮೀನಿನಲ್ಲಿ ಅಥವಾ ಬೇಸಾಯಕ್ಕೆ ಸೂಕ್ತವಿಲ್ಲದ ಭೂಮಿಯಲ್ಲಿ ಅಥವಾ ರಸ್ತೆಯ ಬದಿಗಳಲ್ಲಿ ನೆಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಂತ ರೈತರಿಗೆ ಜೈವಿಕ ಇಂಧನಕ್ಕೆ ಸೂಕ್ತವಾದ ಸಸಿಗಳನ್ನು ಹಾಗೂ ಕೈಪಿಡಿಯನ್ನು ವಿತರಿಸಲಾಯಿತು.

’ಜೈವಿಕ ಇಂಧನ ಭವಿಷ್ಯದ ಇಂಧನ’ ಹಸಿರೇ ಉಸಿರು ಎನ್ನುವ ಘೋಷಣೆಗಳೊಂದಿಗೆ ಶಾಲಾ ಆವರಣದಲ್ಲಿ ಸಿಬ್ಬಂದಿ ಹಾಗೂ ರೈತರ ಸಹಭಾಗಿತ್ವದಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಟ್ಟು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಕೃಷಿ ವಿಶ್ವವಿದ್ಯಾಲನಿಯದಿಂದ ತರಲಾಗಿದ್ದ ಸಸಿಗಳನ್ನು ವಿದ್ಯಾರ್ಥಿಗಳು ರೈತರಿಗೆ ವಿತರಿಸಿದರು‌.ಇದರ ಜೊತೆಗೆ ಜೈವಿಕ ಇಂಧನ ಕಾರ್ಯಕ್ರಮದ ಅಂಗವಾಗಿ ತಂದಿದ್ದ ಸಸಿಗಳನ್ನು ಸಮರ್ಪಕವಾಗಿ ರೈತರ ಜಮೀನು ಹಾಗೂ ರಸ್ತೆ ಬದಿಗಳಲ್ಲಿ ನೆಡುವ ಮೂಲಕ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಹಳ್ಳಿಯ ರೈತ ಬಾಂಧವರು, ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿವರ್ಗದವರು, ಕೆ ವಿ ಕೆಯ ವಿಜ್ಞಾನಿ ಡಾ.ಬಾಬು ಆರ್.ಎಂ.ಹಾಗೂ ಶಿಬಿರಾರ್ಥಿಗಳು ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *

× How can I help you?