ಕೆ.ಆರ್.ಪೇಟೆ ಹಾಗೂ ಕಿಕ್ಕೇರಿ ಉಪಕೇಂದ್ರಗಳಲ್ಲಿ ನಿರ್ವಹಣಾ ಕಾರ್ಯ: ಮೇ 10ರಂದು ವಿದ್ಯುತ್ ವ್ಯತ್ಯಯ

ಕೆ.ಆರ್.ಪೇಟೆ: ಪಟ್ಟಣದ 66/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹಾಗೂ ಕಿಕ್ಕೇರಿ ಪಟ್ಟಣದ 66/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಪ್ರಥಮ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ, ದಿನಾಂಕ 10-05-2025 ಶನಿವಾರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಈ ಎರಡೂ ಉಪಕೇಂದ್ರಗಳಿಂದ ಹೊರ ಹೋಗುವ ಎಲ್ಲಾ ಫೀಡರ್‌ಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಚೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಪುಟ್ಟಸ್ವಾಮಿ ಅವರು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಈ ನಿರ್ವಹಣಾ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?