ಕೆ.ಆರ್.ಪೇಟೆ;ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಮತ್ತು ಹೆಗ್ಗಡಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಇದ್ದ ಬಸವ (25) ವಯೋ ಸಹಜ ಕಾಯಿಲೆಯಿಂದ ಗುರುವಾರ ಸಾವನಪ್ಪಿದ್ದು, ಮೆರವಣಿಗೆ ಮುಖಾಂತರ ಬಸವನನ್ನು ಅಂತ್ಯಕ್ರಿಯೆ ನಡೆಸಲಾಗಿತ್ತು.
ಐದು ದಿನಗಳ ಬಳಿಕ ನಂತರ ಹೆಗ್ಗಡಹಳ್ಳಿ ಗ್ರಾಮಸ್ಥರು ಮತ್ತು ಯುವಕರ ಬಳಗದ ವತಿಯಿಂದ ಇಂದು ಗ್ರಾಮದಲ್ಲಿ ಅನ್ನಸಂತರ್ಪಣೆ ನೆರವೇರಿಸಿ ಊರಿನ ಪ್ರಮುಖ ಬೀದಿಯಲ್ಲಿ ಬಸವನ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು.
————— ಮನು ಮಾಕವಳ್ಳಿ ಕೆ ಆರ್ ಪೇಟೆ