ಕೊರಟಗೆರೆ-ವಿದ್ಯಾಭ್ಯಾಸ-ಮಾಡಿದ-ಶಾಲೆಯ-ಮಕ್ಕಳಿಗೆ-ಕಲಿಕಾ- ಸಾಮಗ್ರಿ-ವಿತರಿಸಿ-ತಮ್ಮ -56ನೇ-ವರ್ಷದ-ಹುಟ್ಟು-ಹಬ್ಬದ-ಆಚರಣೆ- ಮಾಡಿಕೊಂಡ-ಮಾಲಿಂಗಪ್ಪ

ಕೊರಟಗೆರೆ – ತಾಲ್ಲೂಕಿನ ಕೋಳಾಲ ಹೋಬಳಿಯ ಹೊಸಕೋಟೆ ಗ್ರಾಮದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾಗೂ ಕೊರಟಗೆರೆ ರಾಜಕೀಯ ಮುಖಂಡ ಹೆಸರಾಂತ ಕೆ.ಇ.ಬಿ. ಕಂಟ್ರಾಕ್ಟರ್ ಮಾಲಿಂಗಪ್ಪನವರ 56ನೇ ವರ್ಷದ ಹುಟ್ಟುಹಬ್ಬವನ್ನು ಅವರ ತಂದೆ ಕಾವಲಪ್ಪ ತಾಯಿ ಈರಮ್ಮ ಸಮ್ಮುಖದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಸಕೋಟೆಯಲ್ಲಿ ಆಚರಣೆ ಮಾಡಲಾಯಿತು.

ಈ ವೇಳೆ ಶಾಲೆಯ ಶಿಕ್ಷಕ ಹರೀಶ್ ಮಾತನಾಡಿ, ಹೊಸಕೋಟೆ ಶಾಲೆ ಹಾಗೂ ಹೊಸಕೋಟೆ ಹಳ್ಳಿಯನ್ನು ಗುರುತಿಸಿ ಹೇಳಬೇಕಾದರೆ. ಮಾಲಿಂಗಪ್ಪನವರ ಊರು ಎಂದು ತಾಲೂಕಿನಲ್ಲಿ ಹಾಗೂ ಹಲವಾರು ಕಡೆ ನಾವು ಕೇಳಿದ್ದು. ಮಹಾಲಿಂಗಪ್ಪನವರು ಹಲವಾರು ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹಾಗೂ ಮಾನ್ಯತೆ ಪಡೆದಿದ್ದಾರೆ.

ಅವರ ಆದರ್ಶಗಳನ್ನು ಇಟ್ಟುಕೊಂಡು ಈ ಶಾಲೆಯ ವಿದ್ಯಾರ್ಥಿಗಳು ಅವರಂತೆ ದೊಡ್ಡ ವ್ಯಕ್ತಿಯಾಗಿ ಬೆಳೆಯಿರಿ. ಮಾಲಿಂಗಪ್ಪನವರು ಓದಿದ ಶಾಲೆಗೆ ಬಂದು ಸಿಹಿ ಹಂಚುವ ಮತ್ತು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ವಿದ್ಯಾರ್ಥಿಗಳಿಗೆ ಬೇಕಾದ ಸಾಮಗ್ರಿಗಳನ್ನು ಕೊಡುವ ಮೂಲಕ 56ನೇ ವರ್ಷದ ಹುಟ್ಟಿದ ಹಬ್ಬವನ್ನು ವಿಶೇಷವಾಗಿ ಮಾಡಿಕೊಳ್ಳುತ್ತಿರುವ ನಮಗೆ ಹಾಗೂ ಊರಿನವರಿಗೆ ಬಹಳ ಸಂತೋಷದ ವಿಷಯ.

ಶಾಲೆಯ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವುದು ನಮ್ಮಗಳ ಭಾಗ್ಯ ಹಾಗೂ ನಮ್ಮ ಶಾಲೆಗೆ ಸುಂದರವಾದ ಆಕಾರ ಬಂದಿದೆ ಎಂದರೆ, ಮಾಲಿಂಗಪ್ಪನವರ ಮೊದಲ ಆದ್ಯತೆ.

ಮಹಾಲಿಂಗಪ್ಪನವರಿಗೆ ಊರಿನ ಗ್ರಾಮ ದೇವತೆ ಹಾಗೂ ಗುರು ಹಿರಿಯರ ಆಶೀರ್ವಾದ ಆರೋಗ್ಯ ಆಯಸ್ಸು ಮುಂದೆ ಬರುವ ದಿನಗಳಲ್ಲಿ ಅವರನ್ನು ಶಾಸಕ ಸ್ಥಾನದಲ್ಲಿ ನೋಡುವ ಸಂದರ್ಭ ನಮಗೆ ಹಾಗೂ ಅವರ ಅಭಿಮಾನಿಗಳಿಗೆ ಬರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ದೇವರಾಜು. ಕೃಷ್ಣಪ್ಪ. ಮಂಜುನಾಥ್. ಎಸ್ ಡಿ ಎಂ. ಸಿ ಅಧ್ಯಕ್ಷ ಹನುಮಂತರಾಯಪ್ಪ. ವರದಿಗಾರ ಮುತ್ತುರಾಜ್ ವರದಿಗಾರ ನರಸಿಂಹಯ್ಯ. ರಾಜಣ್ಣ ಅಂಗಡಿ ಕೆಂಪರಾಜು ಕರಿಯಪ್ಪ ಶಿವಲಿಂಗಯ್ಯ. ಚಿತ್ತಪ್ಪ. ಕೆಂಪರಾಜು. ಲಿಂಗಯ್ಯ. ಮಂಜು. ಊರಿನ ಗ್ರಾಮಸ್ಥರು ಹಾಜರಿದ್ದರು.

– ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?