ಬೇಲೂರು-ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್[ಇ ಇ ಇ ವಿಭಾಗ] ಕಲಿಯುತ್ತಿದ್ದ ಕುಮಾರಿ ವರ್ಷಿಣಿ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿ ಪ್ರಶಸ್ತಿಗಳ ಜೊತೆಗೆ ಚಿನ್ನದ ಪದಕ ಗಳಿಸುವ ಮೂಲಕ ಬೇಲೂರಿಗೆ ಕೀರ್ತಿಯನ್ನು ತಂದಿದ್ದಾರೆ.
ಬೇಲೂರು ಪಟ್ಟಣದ ಆಶಾಮಣಿ ಬಾಂಗ್ರೆ,ಇಂದ್ರೇಶ್ ದಂಪತಿಗಳ ಪುತ್ರಿಯಾದ ವರ್ಷಿಣಿಗೆ ಕಾಲೇಜಿನಿಂದ ಸಾಧಕರಿಗೆ ಕೊಡಮಾಡುವ ಐದು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಪದವಿ ಪ್ರಧಾನ ಸಮಾರಂಭದಲ್ಲಿ ಡಾ ಎ ಜೆ ಕೃಷ್ಣಯ್ಯನವರು ನೀಡಿ ಸನ್ಮಾನಿಸಿದರು.
ಈಕೆಯ ಈ ಸಾಧನೆಗೆ ಭಾವಸಾರ ಕ್ಷತ್ರಿಯ ಸಮಾಜದ ಮುಖ್ಯಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹಾಗು ದೇಶಕ್ಕೆ ಹೆಸರು ತರುವಂತಹ ಇನ್ನು ಹೆಚ್ಚಿನ ಸಾದನೆಗಳನ್ನು ಕುಮಾರಿ ವರ್ಷಿಣಿ ಮಾಡಲಿ ಎಂದು ಶುಭ ಹಾರೈಸಿದ್ದಾರೆ.
————————–ನೂರ್ ಅಹಮ್ಮದ್