ಮಂಡ್ಯ: ನಗರದ 33ನೇ ವಾರ್ಡಿನ ಜೈ ಕರ್ನಾಟಕ ಪರಿಷತ್ತು ನೂತನ ಮಹಿಳಾಧ್ಯಕ್ಷರಾಗಿ ಪುಟ್ಟಮ್ಮ ಅವರನ್ನು ನೇಮಕ ಮಾಡಲಾಯಿತು.
ಮಂಡ್ಯದ ಗುತ್ತಲು ರಸ್ತೆಯಲ್ಲಿರುವ ನುಡಿಭಾರತಿ ಸಮುದಾಯ ಭವನದಲ್ಲಿ ನೂತನ ಅಧ್ಯಕ್ಷರಿಗೆ ಎಲ್ಲಾ ಶಾಖೆ ಅಧ್ಯಕ್ಷರು ಸೇರಿ ಅಭಿನಂದಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಮಾತನಾಡಿ, ಜನರು ಸಂಘಟಿತರಾಗಬೇಕು ಇದಕ್ಕೆ ಅಧಿಕಾರ ಬೇಕಾಗಿಲ್ಲ ಮನಸ್ಸಿದ್ದರೆ ಸಾಕು. ಸರ್ಕಾರದ ಮೂಲ ಭೂತ ಸೌಕರ್ಯಗಳು ಜನರಿಗೆ ದೊರಕಬೇಕು. ಎಲ್ಲಾ ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂದರು.
ಬಡ ಸಾಮಾನ್ಯ ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕಬೇಕು. ಇಂತಹ ಹತ್ತು ಹಲಾವಾರು ಸಮಸ್ಯೆಗಳಿಗೆ ಸಂಘಟಿತರಾಗಬೇಕು ಈಗಾಗಲೇ ಜೈ ಕರ್ನಾಟಕ ಪರಿಷತ್ತು ಶಾಖಾಧ್ಯಕ್ಷರುಗಳು ಉತ್ತಮ ಸಮಾಜ ಸೇವೆ ಮಾಡುತ್ತಾ ಬರುತ್ತಿದ್ದಾರೆ ಅವರ ಜೊತೆ ಸದಾ ಜೈ ಕರ್ನಾಟಕ ಪರಿಷತ್ತು ಸಂಸ್ಥೆ ಜೊತೆಯಲ್ಲಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಸಲಾಯಿತು. ಅಧ್ಯಕ್ಷತೆ ವಹಿಸಿದ ನೂತನ ಶಾಖಾಧ್ಯಕ್ಷರಾದ ಪುಟ್ಟಮ್ಮ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ 33ನೇ ವಾರ್ಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ನಮ್ಮೆಲ್ಲಾ ಜೈ ಕರ್ನಾಟಕ ಪರಿಷತ್ತಿನ ಶಾಖಾಧ್ಯಕ್ಷರು ನಮಗೆ ಸಹಕಾರ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಸುಶಿಲಮ್ಮ, ಕೆಂಪೇಗೌಡ, ಬಿ.ಪುಟ್ಟಸ್ವಾಮಿ, ಪುಟ್ಟೇಗೌಡ, ಬಿ.ಡಿ.ಪುಟ್ಟಸ್ವಾಮಿ, ಮಂಜುಳ ದೇವರಾಜು, ತಾಯಮ್ಮ, ವೈ.ಕೆ.ಪುಟ್ಟಸ್ವಾಮಿ, ನಾರಾಯಣಸ್ವಾಮಿ, ಮಧುಸೂದನ್, ವೀಣಾಂಬ ಭಾಗವಹಿಸಿದರು.