ಮಂಡ್ಯ-ಆಲಕೆರೆಯಲ್ಲಿ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮತ್ತು ಶಿವದೀಪೋತ್ಸವ ಕಾರ್ಯಕ್ರಮ

ಮಂಡ್ಯ-ಮಂಡ್ಯ ತಾಲ್ಲೂಕು,ಕೆರಗೋಡು ಹೋಬಳಿ,ಆಲಕೆರೆ ಗ್ರಾಮದ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮತ್ತು ಶಿವದೀಪೋತ್ಸವ ಕಾರ್ಯಕ್ರಮ ನಾಳೆ(ಡಿ.13) ಶುಕ್ರವಾರ ರಾತ್ರಿ 9ರಿಂದ ಡಿ.14ರ ಬೆಳಗಿನ ಜಾವ 6 ಗಂಟೆಯವರೆಗೆ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿರವರ ದೀಪೋತ್ಸವ, ಜಗಜ್ಯೋತಿ ಮತ್ತು ರಥೋತ್ಸವ ಮೆರವಣಿಗೆ ಏರ್ಪಡಿಸಲಾಗಿದೆ.

ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದ್ದು, ಈ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳ ಭಕ್ತರು ಹೆಚ್ಚಾಗಿ ಆಗಮಿಸುವ ಮೂಲಕ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿಯ ದರ್ಶನ ಪಡೆದು ಪುನೀತರಾಗಬೇಕೆಂದು ಅಲಕೆರೆ ಮತ್ತು ಕೀಲಾರ ಗ್ರಾಮಸ್ಥರ ಪರವಾಗಿ ನಿವೃತ್ತ ಪ್ರಾಧ್ಯಾಪಕರಾದ ಸಿ.ಸಿದ್ದರಾಜು ಆಲಕೆರೆ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

× How can I help you?