ಮಂಡ್ಯ: ತಾಲ್ಲೂಕಿನ ಹೊಳಲು ಗ್ರಾಮದ ಜನಪದ ಕಲಾವಿದ, ಸಮಾಜ ಸೇವಕ ಹಾಗೂ ಮಾಜಿ ಸಚಿವ ದಿ.ಅಂಬರೀಶ್ ಅವರ ಆಪ್ತ ಸಹಾಯಕರಾಗಿದ್ದ ಎಚ್.ವಿ.ಪರಮೇಶ್ವರ(55) ಅವರು ಅನಾರೋಗ್ಯದಿಂದ ನಿಧನ ಹೊಂದಿದರು.
ಮೃತರಿಗೆ ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ಹೊಳಲು ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ಗುರುಮಕ್ಕಳ ವಿಧಿ ವಿಧಾನದೊಂದಿಗೆ ನೆರವೇರಿಸಲಾಯಿತು.
ಮೃತರ ನಿಧನಕ್ಕೆ ಮಾಜಿ ಶಾಸಕರಾದ ಎಚ್.ಬಿ.ರಾಮು, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷರಾದ ಎಚ್.ಎಲ್.ಶಿವಣ್ಣ,
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್ ಕುಮಾರ್, ಮಂಡ್ಯ ಮೈಸೂರು ಸಕ್ಕರೆ ಕಂಪನಿಯ ಅಧ್ಯಕ್ಷರಾದ ಸಿ.ಡಿ.ಗಂಗಾಧರ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾದ ವಿಜಯಕುಮಾರ್ ಚಂದಗಾಲು, ಹೊಳಲು ಗ್ರಾ.ಪಂ.ಅಧ್ಯಕ್ಷರಾದ ಅರ್ಪಿತ, ಮಾಜಿ ಅಧ್ಯಕ್ಷ ಎಚ್.ಡಿ. ರವಿ, ಮಂಡ್ಯ ಜಿಲ್ಲಾ ಮುದ್ರಾಣಾಲಯ ನಿರ್ದೇಶಕ ಎಚ್.ಎಸ್. ನಂದೀಶ್ ಮುಂತಾದವರು ಹಾಜರಿದ್ದರು.