ಮಂಡ್ಯ-ಹೊಳಲು ಗ್ರಾಮದಲ್ಲಿ ಅಧಿದೇವತೆ ಶ್ರೀ ದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಮಾಸದ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮಂಗಳವಾರ ಸಂಜೆ ದೊಡ್ಡಮ್ಮ ತಾಯಿ ದೇವಿಗೆ ಕ್ಷೀರಭಿಷೇಕ ಕುಂಕುಮಾರ್ಚನೆ ರುದ್ರಾಭಿಷೇಕ,ಹಾಗೂ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮಗಳನ್ನ ಶ್ರೀ ತಾಂಡವೇಶ್ವರ ದೇವಸ್ಥಾನದ ಅರ್ಚಕರಾದ ಮಂಜುನಾಥ್ ದೀಕ್ಷಿತ್ ರವರು ನೆರವೇರಿಸಿದರು.
ಕಾರ್ತಿಕ ಮಾಸದ ಪ್ರಯುಕ್ತ ಹೊಳಲು ಗ್ರಾಮದ ಮಹಿಳೆಯರು,ಮಕ್ಕಳು ರಂಗೋಲಿ ಬಿಟ್ಟು ಮಣ್ಣಿನ ಹಣತೆ ಇಟ್ಟು ದೀಪೋತ್ಸವವನ್ನು ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹೊನ್ನಮ್ಮ, ಎಚ್.ಬಿ.ರಾಮು,ಅನುಪಮಾ ಕುಮಾರಿ,ಯೋಗೇಶ್ ಕುಮಾರ್, ದೀಪೋತ್ಸವ ಸಮಿತಿಯ ಸದಸ್ಯರಾದ ಶಂಕರ್,ಪ್ರದೀಪ್ ಕುಮಾರ್,ರವಿ, ತಮ್ಮಣ್ಣ,ವೆಂಕಟೇಶ್, ಮಾದೇವ,ರಜಿನಿ,ಹಾಗೂ ಗುಡ್ಡಪ್ಪ, ಶಿವರಾಜ್, ಚಿಕ್ಕಣ್ಣ,ಶ್ರೀಬಲಮುರಿ ಗಣಪತಿ ದೇವಸ್ಥಾನದ ಅರ್ಚಕರಾದ ಪ್ರಶಾಂತ್, ಇತರರು ಉಪಸ್ಥಿತರಿದ್ದರು.
———-–ಕೆ.ಪಿ. ಕುಮಾರ್, ಹೊಳಲು.