ಮಂಡ್ಯ:ರಾಜ್ಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ನಿರ್ದೇಶಕ ಶ್ರೀಧರ್ ಅವರು ಮಂಡ್ಯ ತಾಲ್ಲೂಕು ಹೊಳಲು ಗ್ರಾಮಪಂಚಾಯಿತಿಗೆ ಸೋಮವಾರ ಭೇಟಿ ನೀಡಿ ಸಾಮಾಜಿಕ ಲೆಕ್ಕ ಪರಿಶೋಧನ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಅವರು , ಮಹಾತ್ಮಗಾಂಧಿ ನರೇಗ ಯೋಜನೆ ಮತ್ತು 15 ನೇ ಹಣಕಾಸು ಯೋಜನೆಯಯಡಿ ಸರ್ಕಾರದಿಂದ ಬರುವ ಅನುದಾನವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಲುಪಬೇಕು.ಮತ್ತು ಅಡಕ್ ಸಮಿತಿ ಸಭೆಯಲ್ಲಿ ವಸೂಲಾತಿ ಆಕ್ಷೇಪಣೆ ತಿರುವಳಿ ಕಡ್ಡಾಯವಾಗಿ ಆಗಬೇಕು.ಎಂದು ಮಾಹಿತಿ ನೀಡಿದರು .
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಎಸ್ ಸುರೇಶ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ರೂಪ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ ಮೂರ್ತಿ. ಶ್ಯಾಮಲಾ.ಮಾಯಿಗೌಡ, ವಿನೋದ್,ರಕ್ಷಿತಾ, ದರ್ಶಿನಿ,ಹಾಗೂ ಗ್ರಾಮ ಪಂಚಾಯಿತಿ ಫಿ.ಡಿಓ ಸಂತೋಷ್ ಕುಮಾರ್, ಅಧ್ಯಕ್ಷರಾದ ಅರ್ಪಿತ ,ಸದಸ್ಯರು ಮತ್ತು ಸಿಬಂದಿವರ್ಗ ,ಸಾರ್ವಜನಿಕರು ಹಾಜರಿದ್ದರು.