ಮಂಡ್ಯ-ಹೊಳಲು ಗ್ರಾಮದ ಶ್ರೀ ಚಿತ್ರನಾಳಮ್ಮ ಪಟ್ಟಲದಮ್ಮ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಾಗರಕಟ್ಟೆ, ಅರಳಿಕಟ್ಟೆ, ರಾಜಗೋಪುರ, 52 ದೇವತೆಗಳ ಶಕ್ತಿಪೀಠ, ಬಲಿಪೀಠ, ಗರುಡಗಂಭ, ಅಮ್ಮನವರ ಪಾದುಕೆ, ಸಿಂಹಾವಾಹನ,ಮಹಾದ್ವಾರ ಕಲ್ಲಿನ ಜೋಡಿ ಆನೆಗಳ ಪ್ರತಿಮೆ ಹಾಗೂ ವಿಮಾನ ಗೋಪುರ ಕಳಸ ಉದ್ಘಾಟನೆ ನ.,6 ರ ಬುಧವಾರದಂದು ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಿಗ್ಗೆ 6,ರಿಂದ ಪಲಾನ್ಯಾಸ, ದೇವತಾರಾಧನೆ, ಪ್ರಾರ್ಥನೆ , ನಾಗಸನ್ನಿಧಿಯಲ್ಲಿ ಬಿಂಬಸುದ್ದಿ, ಸ್ಥಳಶುದ್ಧಿ, ಧಾನ್ಯದಿವಸ, ಸೋಬಾನೆ, ಕಳಸ ಪ್ರತಿಷ್ಠಾಪಿಸುವ ಮೂಲಕ ಗಂಗೆಸಮೇತ ಪೂಜಾ ವಿಧಿ ವಿಧಾನಗಳು ನಡೆಯಲಿವೆ.
ನ.7 ರ ಗುರುವಾರದಂದು ಬೆಳಿಗ್ಗೆ ನಾಗಸನ್ನಿಧಿಯಲ್ಲಿ ನಾಗಪ್ರತಿಷ್ಠೆ, ದೇವಾಲಯದಲ್ಲಿ ಗಣಪತಿಹವನ, ಬಿಂಬಸುದ್ದಿ, ಸಂಜೆ ಕಳಸಾ ಪ್ರಸ್ತಾಪನೆ, ಸುಮಂಗಲಿಯರಿಂದ ರಾತ್ರಿ 10ಗಂಟೆಗೆ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ 8 ಗಂಟೆಗೆ ದೊಡ್ಡಯ್ಯ-ಬೀರೇಶ್ವರ 8 ಕೂಟಗಳ ಬಸವ ಪೂಜೆ, ಹೂಹೊಂಬಾಳೆ ಯನ್ನು ದೇವಿಗೆ ಅರ್ಪಿಸಿ ಹೊಳಲು ಗ್ರಾಮದಿಂದ ದೇವಸ್ಥಾನದವರೆಗೆ ದೇವರ ಮೆರವಣಿಗೆ ಮಾಡಲಾಗುವುದು.
ನ.8 ರ ಶುಕ್ರವಾರ ಬೆಳಿಗ್ಗೆ 7ಗಂಟೆಗೆ ಕಲಾ ಹೋಮ, “ನವಚಂಡಿಕಾಹವನ” ಇತರೆ ಹೋಮಗಳನ್ನು ನೆರವೇರಿಸಿದ ನಂತರ ಶ್ರೀಬಲಮುರಿ ಗಣಪತಿ ದೇವಾಲಯದ ಆವರಣದಿಂದ ಕಳಸ ಪೂಜಿಸಿಕೊಂಡು ನಂತರ 12ದೇವರ ಪೂಜಾ ಕೂಟ , 201 ಮಹಿಳೆಯರಿಂದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪುರುಷೋತ್ತಮ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯೊಂದಿಗೆ ಚಿತ್ತನಳಿಯಮ್ಮ ದೇವಾಲಯಕ್ಕೆ ಕರೆತರಲಾಗುವುದು.
ತರುವಾಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10ಗಂಟೆಗೆ ಸುಮಾರು 15ಸಾವಿರ ಭಕ್ತಾಧಿಗಳಿಗೆ ಕಜ್ಜಾಯದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಹೊಳಲು ಗ್ರಾಮದಿಂದ ಪ್ರಮುಖ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಧರ್ಶನ ಪುಟ್ಟಣ್ಣಯ್ಯ, ರವಿಕುಮಾರ್ ಗಣಿಗ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದರಾದ ಸುಮಲತಾ ಅಂಬರೀಷ್, ಕು.ರಮ್ಯಾ, ಹಾಗೂ ಮಂಡ್ಯ ಜಿಲ್ಲೆಯ ಜನಪ್ರಿಯ ನಾಯಕರುಗಳು , ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಮಾಜಿ ಶಾಸಕ ಹಾಗೂ ಚಿತ್ತನಾಳಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ರಾಮು, ಗೌರವ ಅಧ್ಯಕ್ಷರಾದ ಎಚ್.ಎಲ್.ಶಿವಣ್ಣ, ಉಪಾಧ್ಯಕ್ಷ ಸದಾನಂದ, ಕಾರ್ಯದರ್ಶಿ ಎಚ್.ಎಲ್. ಶಿವಲಿಂಗಯ್ಯ, ಸಹ ಕಾರ್ಯದರ್ಶಿ ಸಿದ್ದರಾಮು, ಖಜಾಂಜಿ ಪಟೇಲ್ ರಾಮು,ಸಂಘಟನ ಕಾರ್ಯದರ್ಶಿ ಯಜಮಾನ್ ಕುಮಾರ , ದೇವಸ್ಥಾನ ಟ್ರಸ್ಟ್ ಸಂಚಾಲಕರಾದ ಜಟ್ಟಿಕುಮಾರ್ ಹಾಗೂ ಟ್ರಸ್ಟ್ ಸದಸ್ಯರಾದ ಚಂದನ್ ಹಂಚಿನಟ್ಟಿ, ನಿಂಗೇಗೌಡ, ಎಚ್ ಕೆ ನಾಗರಾಜ್, ಎಚ್. ಎಲ್. ಲಿಂಗರಾಜು, ಎಚ್.ಎಸ್ .ರವಿಶಂಕರ್, ಹಾಗೂ ಮತ್ತಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ .
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ.
——ಕೆ .ಪಿ. ಕುಮಾರ್, ಹೊಳಲು.