ಮಂಡ್ಯ-ಹೊಳಲು ಗ್ರಾಮದಲ್ಲಿ ನವರಾತ್ರಿ (ದಸರಾ) ಹಬ್ಬದ ಪ್ರಯುಕ್ತ ಪ್ರತಿಯೊಂದು ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಹಾಗೂ ಆರ್ಚ್ (ದೇವರ ಮೂರ್ತಿಗಳು) ಗಳನ್ನು ಹಾಕಲಾಗಿತ್ತು .
ಸೋಮವಾರ ರಾತ್ರಿ ಶ್ರೀ ಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿ ಶ್ರೀ ದೊಡ್ಡಯ್ಯ ಸ್ವಾಮಿ ,ಶ್ರೀ ಚಿಕ್ಕಯ್ಯ ಸ್ವಾಮಿ, ಮಲ್ಲಿಗೆರೆ ಮಂತ್ರಿ, ಏಳೂರಮ್ಮ ದೇವಿ, ಹುಚ್ಚಮ್ಮ ದೇವಿ ಸೇರಿದಂತೆ ಒಟ್ಟು 5 ದೇವರುಗಳಿಗೆ ವಿವಿಧ ಹೂಗಳಿಂದ,ಹೊಂಬಾಳೆ ತೊಡಿಸಿ ಅಲಂಕರಿಸಲಾಗಿತ್ತು.
ವಿಶೇಷ ಪೂಜೆಯ ನಂತರ ದೇಗುಲದ ಆವರಣದಲ್ಲಿ ಮೆರವಣಿಗೆ ಮಾಡಿ ಗ್ರಾಮದ ರಂಗಮಂದಿರ ಆವರಣದಲ್ಲಿ ರಾತ್ರಿಪೂರ ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ಬೆಳಿಗ್ಗೆ ಶ್ರೀದೊಡ್ಡಯ್ಯ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಜಾತ್ರಾ ಮಹೋತ್ಸವ ಜರುಗಿತು.
ಭಕ್ತಾದಿಗಳಿಗೆ ಜಾನಕಮ್ಮ ಬೇಕರಿಯ ಪ್ರಶಾಂತ್ ಮತ್ತು ರವಿ ಹಾಗು ರಾಮಚಂದ್ರ ಕುಟುಂಬಗಳ ವತಿಯಿಂದ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀದೊಡ್ಡಯ್ಯ ಸ್ವಾಮಿ ದೇವಸ್ಥಾನದ ಅರ್ಚಕರಾದ ದೊಡ್ಡಯ್ಯ ಮಾತನಾಡುತ್ತಾ, ಈ ದೇವರಿಗೆ ವಿಶೇಷ ಪೂಜೆ ಮಾಡಿದರೆ ಅವರ ಆಸೆ ಈಡೇರುತ್ತದೆ ಎಂದು ತಿಳಿಸಿದರು.
ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ದೇವರಿಗೆ ಆರತಿ ಬೆಳಗಿಸಿ ವಿಶೇಷ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಚ್ .ಬಿ .ರಾಮು, ರಾಜ್ಯ ಒಕ್ಕಲಿಗರ ಮಾಜಿ ಉಪಾಧ್ಯಕ್ಷರಾದ ಎಚ್ ಎಲ್ ಶಿವಣ್ಣ, ಶ್ರೀ ದೊಡ್ಡಯ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳಾದ ಶಂಕರ್ ಪೂಜಾರಿ ,ತಮ್ಮಣ್ಣ, ಸದಾನಂದ, ಹಾಗೂ ಗ್ರಾಮದ ಮುಖಂಡರಾದ ಹರಿಪ್ರಸಾದ್, ವಿಜಯಕುಮಾರ್, ಯೋಗೇಶ್ ಕುಮಾರ್ , ಜಟ್ಟಿ ಕುಮಾರ್, ಎಚ್ .ಡಿ .ರವಿ, ನವೀನ್, ಚಂದನ್, ನಾಗೇಶ್, ಪಪ್ಪಿ ಸಚಿದಾನಂದ , ನಿಂಗೇಗೌಡ , ಶ್ಯಾಮ್, ಚೇತನ್ ,ಹಾಗೂ ಅರ್ಚಕರಾದ ಪ್ರಕಾಶ್, ದೊಡ್ಡಯ್ಯ ,ಜೈ ಶಂಕರ್ , ಲೋಕೇಶ್ ಹಾಗೂ ಹೊಳಲು ಗ್ರಾಮಸ್ಥರು ಉಪಸ್ಥಿತರಿದ್ದರು.
——————————-ಕೆ.ಪಿ.ಕುಮಾರ್, ಹೊಳಲು