ಮಂಡ್ಯ-ತೋಟಗಾರಿಕೆ-ಇಲಾಖೆಯ-ವಿವಿಧ-ಯೋಜನೆಯಗಳಿಗೆ-ಅರ್ಜಿ- ಆಹ್ವಾನ


ಮಂಡ್ಯ-
ತೋಟಗಾರಿಕೆ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಲ್ಲಿ ಕಾಫಿ, ಟೀ, ರಬ್ಬರ್, ಅಡಿಕೆ ಬೆಳೆ ಹೊರತುಪಡಿಸಿ ಉಳಿದ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಘಟಕದವರಿಗೆ ಪರಿಶಿಷ್ಟ ಜಾತಿವರ್ಗದಡಿ ಒಂದು ಕುಟುಂಬಕ್ಕೆ ಒಟ್ಟಾರೆ 5 ಹೆಕ್ಟೇರ್ ಪ್ರದೇಶಕ್ಕೆ ಮಿತಿಗೊಳಿಸಿ ಸಹಾಯಧನ ಕಲ್ಪಿಸಲಾಗುತ್ತಿದೆ.

 ಈ ಕಾರ್ಯಕ್ರಮದಲ್ಲಿ ಮೊದಲ ಎರಡು ಹೆಕ್ಟೇರ್‌ಗೆ ಎಲ್ಲಾ ವರ್ಗದ ರೈತರಿಗೆ ಶೇಕಡ 90ರಷ್ಟು ಸಹಾಯಧನ ಕಲ್ಪಿಸುವುದು ಹಾಗೂ ಉಳಿದ ಮೂರು ಹೆಕ್ಟರ್‌ಗೆ ಶೇ 90% ರಷ್ಟು ಸಹಾಯಧನ ಕಲ್ಪಿಸಲಾಗುವುದು, ಈ ಯೋಜನೆಯಡಿ ಸಹಾಯಧನ ಪಡೆಯಲು ಇಚ್ಚಿಸುವ ರೈತರು ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು ಹಾಗೂ ನೀರಾವರಿ ಸೌಲಭ್ಯವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.
 ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್‌ಗೆ ಸಹಾಯಧನ ಪಡೆದಿರುವ ಫಲಾನುಭವಿಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಸಹಾಯಧನವನ್ನು ಕಲ್ಪಿಸಲು ಅವಕಾಶವಿದ್ದು, ಫಲಾನುಭವಿಗಳು ಯೋಜನೆ ಸದುಪಯೋಗವನ್ನು ಪಡಿಸಿಕೊಳ್ಳಲು ತಮ್ಮ ತಾಲೂಕು ಕಚೇರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೆ.ಆರ್ ಪೇಟೆ (ಜಿ.ಪಂ) ದೂ.ಸಂ: 08237-262540, ಮದ್ದೂರು (ಜಿ.ಪಂ) ದೂ.ಸಂ: 08232-233450, ಮಳವಳ್ಳಿ (ಜಿ.ಪಂ) ದೂ.ಸಂ: 08230-242301, ಮಂಡ್ಯ (ಜಿ.ಪಂ) ದೂ.ಸಂ: 08232-225735, ನಾಗಮಂಗಲ (ಜಿ.ಪಂ) ದೂ.ಸಂ: 08234-286160, ಪಾಂಡವಪುರ (ಜಿ.ಪಂ) ದೂ.ಸಂ: 08236-255055 ಶ್ರೀರಂಗಪಟ್ಟಣ (ಜಿ.ಪಂ) ದೂ.ಸಂ:08236-253205 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?