ಮಂಡ್ಯ:- ಜಿಲ್ಲಾ ವತಿಯಿಂದ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತರಬೇತಿ ಕೇಂದ್ರದಲ್ಲಿ ಮೇ 02 ರಿಂದ 2026ರ ಫೆಬ್ರವರಿ 28 ರವರೆಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದ್ದು ಆಸಕ್ತ ಆಭ್ಯರ್ಥಿಗಳು ಅರ್ಜಿಯನ್ನು ತೋಟಗಾರಿಕೆ ಉಪ ನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಲ್ಲಿ ಅಥವಾ https://horticulturedir.karnataka.gov.in ಜಾಲತಾಣದಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಹಿರಿಯ ಸಹಾಯಕ ನಿರ್ದೇಶಕರು ಅಥವಾ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿಗೆ ಏಪ್ರಿಲ್ 28 ರಂದು ಸಂಜೆ 5:30 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.

ಅರ್ಜಿದಾರರಿಗೆ ಏಪ್ರಿಲ್ 29 ರಂದು ಬೆಳಿಗ್ಗೆ:11-00 ಗಂಟೆಗೆ ಸಂದರ್ಶನವನ್ನು ನಡೆಸಲಾಗುವುದು, ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತರಬೇತಿ ಕೇಂದ್ರಕ್ಕೆ ಜಿಲ್ಲೆಯಿಂದ ಅಭ್ಯರ್ಥಿ-08 (ಪುರುಷ-06, ಮಹಿಳೆ-02), ಪರಿಶಿಷ್ಟಜಾತಿ ಅಭ್ಯರ್ಥಿ-3 (ಪುರುಷ-02, ಮಹಿಳೆ-01), ಪರಿಶಿಷ್ಟಪಂಗಡ ಅಭ್ಯರ್ಥಿ-1 (ಪುರುಷ-01) ಮತ್ತು ಅಂಗವಿಕಲ ಅಭ್ಯರ್ಥಿ-01 (ಪುರುಷ-01) ಒಟ್ಟಾರೆ-13 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.
ಅಭ್ಯರ್ಥಿಯು ಕನ್ನಡ ವಿಷಯಗಳೊಂದಿಗೆ S.S.L.C ಉತ್ತೀರ್ಣರಾಗಿರಬೇಕು, ಅಭ್ಯರ್ಥಿಗಳ ತಂದೆ/ತಾಯಿ ಹಾಗೂ ಪೋಷಕರು ಕಡ್ಡಾಯವಾಗಿ ಕೃಷಿ ಜಮೀನು ಹೊಂದಿರಬೇಕು. ಈ ಬಗ್ಗೆ ಪಹಣಿ ನೀಡುವುದು ಕಡ್ಡಾಯವಾಗಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಟ 33 ವರ್ಷ, ಮಾಜಿ ಸೈನಿಕರಿಗೆ ಕನಿಷ್ಟ 33 ವರ್ಷ ಮತ್ತು ಗರಿಷ್ಟ 65 ವರ್ಷ, ಇತರರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಟ 30 ವರ್ಷ ವಯೋಮಿತಿ ಹೊಂದಿರಬೇಕು ಎಂದು ಹಿರಿಯ ತೋಟಗಾರಿಕೆ ನಿರ್ದೇಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.