ಮಂಡ್ಯ; ಜಿಲ್ಲಾ ಗಾಣಿಗರ ಸಂಘದ ವತಿಯಿಂದ ಇದೇ ಸೆ.29ರಂದು ಮಂಡ್ಯ ನಗರದ ಗುರುಶ್ರೀ ಚಿತ್ರಮಂದಿರದ ಸಮೀಪದ ವಿವೇಕಾನಂದ ರಂಗಮಂದಿರದಲ್ಲಿ ಬೆಂಗಳೂರು ಶ್ರೀ ವಿಶ್ವ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷರಾದ ಆರ್.ಶಿವಕುಮಾರ್ ಅವರು ತಿಳಿಸಿದರು.
ಅವರು ಮಂಡ್ಯ ನಗರದ ಎಂ.ಸಿ ರಸ್ತೆಯಲ್ಲಿರುವ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ಮಂಡ್ಯ ಜಿಲ್ಲಾ ಗಾಣಿಗರ ಸಂಘದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೆ.29ರಂದು ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.ಗುರುವಂದನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರು ಉದ್ಘಾಟಿಸಲಿದ್ದು, ವಿಧಾನಪರಿಷತ್ ಮಾಜಿ ಸಭಾಪತಿಗಳಾದ ವಿ.ಆರ್.ಸುದರ್ಶನ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ ಎಂದರು.
ವಿಶ್ವ ಗಾಣಿಗರ ಟ್ರಸ್ಟಿನ ಅಧ್ಯಕ್ಷರು ಹಾಗೂ ಶ್ರೀ ತೈಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಪೂರ್ಣಾನಂದಪುರಿ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ಇರಲಿದ್ದು,ಮಂಡ್ಯ ಶಾಸಕ ರವಿಕುಮಾರ್ ಗೌಡ ಅವರು ಅಭಿನಂದನಾ ನುಡಿಗಳನ್ನಾಡಲಿದ್ದು,ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಮುದಾಯದ ಮುಖಂಡರಾದ ಡಾ.ಯೋಗೇಶ್, ಅಮರ್ನಾಥ್,ವೇಣುಗೋಪಾಲ್,ಜ್ಯೋತಿ ಇಂಟರ್ ನ್ಯಾಶನಲ್ ಹೋಟೆಲ್ ಎಂ.ಆರ್.ಶ್ರೀನಿವಾಸ್, ವಿಜಯ್ ಕುಮಾರ್, ಚಂದ್ರಮೋಹನ್,ರಾಜಶೇಖರ್, ಕೆ.ವಿ.ರಮೇಶ್,ಟಿ.ರಂಗರಾಜು, ನರಸಿಂಹಯ್ಯ, ಮೈಸೂರು ಉಮೇಶ್, ಕೋಲಾರ ಅಶೋಕ್, ಎನ್.ಆರ್.ಗಣೇಶ್ ಬಾಬು, ಗಾಯಿತ್ರಿ ಮುನಿರಾಜು, ಕೆ.ಎ.ಎಸ್.ಅಧಿಕಾರಿ ಎಂ.ಎಸ್.ಕುಮಾರ್, ಸಹಕಾರ ಇಲಾಖೆಯ ಎಂ.ಸಿ.ಮಂಜುನಾಥ್, ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಕುಮಾರ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ನಿರ್ದೇಶಕರಾದ(ನಿ) ಬಿ.ಕೆ.ಬಸವರಾಜು, ವಿಶೇಷ ಆಹ್ವಾನಿತರಾಗಿ ಕೋಲಾರ ಕೋಮುಲ್ ಜಂಟಿ ನಿರ್ದೇಶಕ ಡಾ.ಚೇತನ್, ಪಿವಿಆರ್ ಸಿಲ್ಕ್ಸ್ ಪಿ.ವಿ.ರಾಮಕೃಷ್ಣ, ಮಂಡ್ಯ ಅಪ್ಪಾಜಪ್ಪ, ಎಲೆಕ್ಟ್ರಾನಿಕ್ ಸಿಟಿ ಶ್ರೀನಿವಾಸ್, ರಾಘವೇಂದ್ರ ಗಾಣಿಗ, ಮುಳಬಾಗಿಲು ರಾಘು, ಮದ್ದೂರು ವಿಜಯ್ ಕುಮಾರ್, ಎಂ.ಎನ್.ಪ್ರೇಮ್ ಕುಮಾರ್, ಕೆ.ಉಮೇಶ್, ಡಾ.ಮಧುಸೂಧನ್, ಇಂಜಿನಿಯರ್ ರಾಜು ಮೈಸೂರು, ಹುಣಸೂರು ಬಾಬು, ಹೊಸಕೋಟೆ ಗೋವಿಂದರಾಜು, ಪರಿಸರ ವೇಣುಗೋಪಾಲ್, ಚಾಮರಾಜನಗರ ಅಂಕಶೆಟ್ಟಿ, ತುಮಕೂರು ಲೋಕೇಶ್ ಸಪ್ತಗಿರಿ, ಮೈಸೂರು ವಣಿಯರ್ ಸಂಘದ ಅಧ್ಯಕ್ಷ ಆರ್.ರಾಜು, ರಾಮನಗರ ಸಂಪತ್ತು, ನಾಗೇಂದ್ರ, ಜಿಲ್ಲಾ ಗಾಣಿಗರ ಸಂಘದ ಕಾರ್ಯಾಧ್ಯಕ್ಷ ಎಂ.ಲೋಕೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಂಡ್ಯ ಜಿಲ್ಲೆಯ ಗಾಣಿಗ ಸಮುದಾಯ ಎಲ್ಲಾ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ ಗುರುವಂದನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷರಾದ ಶಿವಕುಮಾರ್ ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹಲವು ಮಂದಿ ಗಾಣಿಗ ಸಮುದಾಯದ ಬಂಧುಗಳು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
—————————-ಶ್ರೀನಿವಾಸ್ ಕೆ ಆರ್ ಪೇಟೆ