ಮಂಡ್ಯ-ಮಡಿವಾಳ-ಮಾಚಿದೇವರರು-12ನೇ ಶತಮಾನದ-ನಾಡಿನ ಒಬ್ಬ-ಶ್ರೇಷ್ಠ ವ್ಯಕ್ತಿ-ಪತ್ರಕರ್ತ ಹಾಗೂ ಲೇಖಕ-ಚಂದ್ರಶೇಖರ್ ದ.ಕೊ.ಹಳ್ಳಿ

ಮಂಡ್ಯ – 12ನೇ ಶತಮಾನದ ಮಡಿವಾಳ ಮಾಚಿದೇವರರು ನಾಡಿನ ಒಬ್ಬ ಶ್ರೇಷ್ಠ ವ್ಯಕ್ತಿ. ಅವರು ತಮಗಾಗಿ ಬದುಕಲಿಲ್ಲ ನಾಡಿಗಾಗಿ ಸಮಾಜಕ್ಕಾಗಿ ಬದುಕಿದವರು ಎಂದು ಪತ್ರಕರ್ತ ಹಾಗೂ ಲೇಖಕ ಚಂದ್ರಶೇಖರ್ ದ.ಕೊ.ಹಳ್ಳಿ ಹೇಳಿದರು.

ಅವರು ತಾಲೂಕು ಹೊಳಲು ಗ್ರಾಮದ ಶ್ರೀ ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ ಶ್ರೀ ತಗಡೂರಯ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ “ಶ್ರೀ ಮಡಿವಾಳ ಮಾಚಿದೇವರ  ಜಯಂತೋತ್ಸವದ” ಪ್ರಯುಕ್ತ “ಆರೋಗ್ಯ ಶಿಬಿರ ಹಾಗೂ ಹಿರಿಯರಿಗೆ ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ”ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಂದಿನ ಪರಿಸ್ಥಿತಿಯಲ್ಲಿ ಅಸಮಾನತೆ, ಅಸ್ಪೃಶ್ಯತೆ , ಮತ್ತು ಎಲ್ಲರಿಗೂ ಶಿಕ್ಷಣ ಸಿಗುತ್ತಿರಲಿಲ್ಲ ಆ ಸಂದರ್ಭದಲ್ಲಿ ಬಸವ ಶರಣರು ಕ್ರಾಂತಿಯನ್ನು ಆರಂಭಿಸಿದರು. ಆವಾಗ ಹೆಚ್ಚು ಪ್ರಬಲವಾಗಿ ನಿಂತವರು ಮಡಿವಾಳ ಮಾಚಿದೇವರು ಹಾಗೂ ಬಸವಣ್ಣನವರನ್ನು ಪ್ರಶ್ನೆ ಮಾಡುವ ಶಕ್ತಿಯನ್ನು ಹೊಂದಿದ್ದರು. ಆದ್ದರಿಂದ ಇವತ್ತಿನ ಯುವಕರು ನಮ್ಮ  ಕಾಯಕವನ್ನು  ಮರೆತು ಹೋಗಿದ್ದೀರಿ. ಪ್ರತಿಯೊಬ್ಬರೂ ತಮ್ಮ ಹಿರಿಯರು ದಾರಿ ತೋರಿಸಿದ ಕಾಯಕವನ್ನ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಸಲಹೆ ಮಾಡಿದರು.


ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷ ಎಚ್. ಎಲ್.ಶಿವಣ್ಣನವರು ಮಾತನಾಡಿ, ನಮ್ಮ ಗ್ರಾಮದಲ್ಲಿ ಇವತ್ತಿಗೂ ಎಲ್ಲಾ ಜನಾಂಗದವರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ಆದ್ದರಿಂದ ಇಂತಹ ಶರಣರ ಕಾರ್ಯಕ್ರಮಗಳು ಬಹಳ ಜನರಿಗೆ ತಿಳಿಸಬೇಕು ಅವರು ಬರೆದಂತಹ ವಚನ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಎಸ್.ಎಸ್.ಎಲ್. ಸಿ. , ಪಿ.ಯು.ಸಿ ಹಾಗೂ ಪದವೀಧರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಕೆ.ಎಫ್.ಎಸ್ಸಿ.ಮಾಜಿ ವ್ಯವಸ್ಥಾಪಕ ವಿಜಯಕುಮಾರ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾರಾಯಣ, ಮಾಜಿ ಉಪಾಧ್ಯಕ್ಷ ಜಯಶಂಕರ್ ,ಡೈರಿ ಅಧ್ಯಕ್ಷ  ಶಿವರಾಮು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗೇಗೌಡ, ಉಪಾಧ್ಯಕ್ಷ ಶಿವಸಿದ್ದಯ್ಯ, ಗ್ರಾಮದ ಮುಖಂಡರಾದ ಜಟ್ಟಿ ಕುಮಾರ್,  ಪುಟ್ಟಸ್ವಾಮಿ  ಶಂಕರ್ ಪೂಜಾರಿ, ಹಾಗೂ ಮಡಿವಾಳ ಸಮುದಾಯದ ಮುಖಂಡರಾದ ಕಂಡಕ್ಟರ್ ಶಿವಲಿಂಗಯ್ಯ, ಜಯರಾಮ, ತಮಟೆ ಚನ್ನಪ್ಪ, ದೇವಸ್ಥಾನದ ಅರ್ಚಕ ಗೊರವಾಲೆ ಶಿವಣ್ಣ, ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?