ಮಂಡ್ಯ-ಜಿಲ್ಲಾ ಪಂಚಾಯತ್ ಕಚೇರಿಯ ಕಾವೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ದೆಹಲಿ, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇನ್ನಿತರ ಸಂಘಟನೆಗಳ ಸಹಯೋಗದೊಂದಿಗೆ ‘ವಿಧಾನ್ ಸೆ ಸಮಾಧಾನ್’ ಕಾನೂನಿನ ಮೂಲಕ ಪರಿಹಾರ ಎಂಬ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಗಾರ ಏರ್ಪಡಿಸಲಾಗಿತ್ತು.
ರಾಷ್ಟ್ರೀಯ ಮಾನವ ಹಕ್ಕುಗಳ ತರಬೇತುದಾರ ಹಿರಿಯ ವಕೀಲ ಎಂ. ಗುರುಪ್ರಸಾದ್ ಬಿ.ಎನ್.ಎಸ್. ಎಸ್ ಮತ್ತು ಡಿ.ವಿ ಕಾಯ್ದೆ ಅಡಿಯಲ್ಲಿ ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳ ಮತ್ತು ಸಾಮಾನ್ಯ ಕಾನೂನಿನ ಬಗ್ಗೆ ತರಬೇತಿ ನೀಡಿ ಮಾತನಾಡಿ, ನಾವು ಕಾನೂನನ್ನು ಗೌರವಿಸಿದರೆ ಕಾನೂನು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬಂತೆ ಮಹಿಳೆಯರಿಗೆ ಕಾನೂನಿನ ಅಡಿಯಲ್ಲಿ ಎಲ್ಲಾ ರೀತಿಯ ಸ್ವಾತಂತ್ರ್ಯ ಅಧಿಕಾರವಿದ್ದು ಮಹಿಳೆಯರು ಅಂತಹ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.
ವರದಕ್ಷಿಣೆ ಕಿರುಕುಳ,ಮರ್ಯಾದೆ ಹತೈ ಅಂತ ಪ್ರಕರಣಗಳು ಬೆಳಕಿಗೆ ಬಂದಾಗ ಪತ್ರಿಕೆಗಳಲ್ಲಿ ಕೌಟುಂಬಿಕ ದೌರ್ಜನ್ಯ ಎಂಬ ಪದ ಕಣ್ಣಿಗೆ ರಾಜೀಸುತ್ತದೆ. ಕೌಟುಂಬಿಕ ವ್ಯವಸ್ಥೆಯ ಬಗೆಗಿನ ವಿಶ್ವಾಸಾರ್ಹತೆಯನ್ನು ಇಂತಹ ದೌರ್ಜನ್ಯಗಳ ಕಡಿಮೆ ಮಾಡುತ್ತಿವೆ ಎಂಬುದನ್ನು ಮನಗಂಡು ವಿಶ್ವ ಸಂಸ್ಥೆ ನವೆಂಬರ್ 25ನ್ನು ಅಂತಾರಾಷ್ಟ್ರೀಯ ಕೌಟುಂಬಿಕ ದೌರ್ಜನ್ಯ ತಡೆ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದರು.
2005ರ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಗಂಡನ ಮನೆಯಿಂದ ಹೊರಬರದೆ ಅಲ್ಲಿಯೇ ಉಳಿಯಲು ಹೇಳಬಹುದು. ಮತ್ತು ಆಕೆಯ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ನೀಡಬಹುದಾಗಿದೆ.
ಒಂದುವೇಳೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಗಂಡನ ಆಸ್ತಿಯಲ್ಲಿ ಪಾಲಿಲ್ಲದಿದ್ದರೂ ಮನೆಯ ಒಂದು ಭಾಗವನ್ನು ಆಕೆಗೆ ನೀಡುವಂತೆ ಹೇಳುವುದು, ಆಕೆಯನ್ನು ಮನೆಯಿಂದ ಹೊರ ಹಾಕುವಂತಿಲ್ಲ ಮತ್ತು ಆಕೆಗೆ ಉದ್ಯೋಗ ಸ್ಥಳದಲ್ಲೂ ತೊಂದರೆ ನೀಡುವಂತಿಲ್ಲ ಎಂಬ ಕಾನೂನು ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಕೌಟಂಬಿಕ ದೌರ್ಜನ್ಯದಲ್ಲಿ ಕೃತ್ಯ ಎಸಗಿದರೆ ಈ ಕಣ್ಣೊನಿನಡಿ ಆ ಕಾನೂನು ಬಾಹಿರ ಕೃತ್ಯಕ್ಕೆ 1 ವರ್ಷ ಸೆರೆವಾಸ, 20,000 ಸಾವಿರ ವರೆಗೆ ದಂಡ ವಿಧಿಸಬಹುದಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಮಿತಿ , ಭಾರತೀಯ ನ್ಯಾಯ ಸಮಿತಿ 2023 ರ ಅಡಿಯಲ್ಲಿ ಕೆಲವೊಂದು ಕಾನೂನಿನ ಬದಲಾವಣೆ ತಂದಿದ್ದು 20 ಹೊಸ ಅಪರಾಧಗಳನ್ನು ಸೇರಿಸಲಾಗಿದೆ. ಐ.ಪಿ.ಸಿ.ಯಲ್ಲಿನ 19 ನಿಬಂಧನೆಗಳನ್ನು ಕೈ ಬಿಡಲಾಗಿದೆ. 33 ಅಪರಾಧಗಳಿಗೆ ಜೈಲು ಶಿಕ್ಷೆಯನ್ನು ಹೆಚ್ಚಿಸಲಾಗಿದ್ದು ಅಪರಾಧಗಳಿಗೆ ದಂಡವನ್ನು ಹೆಚ್ಚಿಸಲಾಗಿದೆ ಎಂದರು.
ವರದಕ್ಷಿಣೆ ಕಿರುಕುಳ ಕಾಯಿದೆ ಅಡಿಯಲ್ಲಿ ವರದಕ್ಷಿಣೆ ಕೊಲೆ ಆತ್ಮಹತ್ಯೆಗೆ ಪ್ರಚೋದನೆ, ಕ್ರೌರ್ಯ, ವಂಚನೆ, ಕೌಟುಂಬಿಕ ಹಿಂಸೆ ಇದರ ಅಡಿಯಲ್ಲಿ ಶಿಕ್ಷೆಗೆ ಅಪರಾಧವಾಗಿದ್ದು ಇಂತಹ ಕೃತ್ಯ ಎಸಗಿದ ಗಂಡ ಅಥವಾ ಅವರ ಕುಟುಂಬದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಜನಸಾಮಾನ್ಯರಿಗೆ ಕಾನೂನಿನ ಅರಿವು ಮತ್ತು ನೆರವು ನೀಡುವಲ್ಲಿ ಪ್ರತಿಯೊಂದು ಜಿಲ್ಲಾ ತಾಲೂಕುಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವಿದ್ದು ಅದರ ಸದುಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶರಾದ ಎಂ. ಆನಂದ್ ರವರು ಕಾರ್ಯಕ್ರಮ ಆಯೋಜನೆ ಮಾಡಿದ್ದು ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಸಂಘ-ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಂಡಿತು.
—————ಶ್ರೀನಿವಾಸ್ ಕೆ ಆರ್ ಪೇಟೆ