ಮಂಡ್ಯ-ಈ ನಾಡು ಕಂಡಂತಹ ಹಲವಾರು ವ್ಯಕ್ತಿಗಳು ಧೀಮಂತ ನಾಯಕರಲ್ಲಿ ಎಚ್.ಡಿ.ಚೌಡಯ್ಯನವರು ಸಹ ಒಬ್ಬರು. ಅವರು ಮಾಡಿದಂತಹ ಹಲವಾರು ಜನಪರ ಅಭಿವೃದ್ಧಿ ಕಾರ್ಯಕ್ರಮಗಳು ಇಂದಿಗೂ ಸಹ ಚಿರಸ್ಮರಣೀಯ ಎಂದು ಮಾಜಿ ಶಾಸಕರಾದ ಎಚ್.ಬಿ.ರಾಮು ತಿಳಿಸಿದರು.
ತಾಲೂಕು ಹೊಳಲು ಗ್ರಾಮದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಡಾಕ್ಟರ್ ಎಚ್.ಡಿ.ಚೌಡಯ್ಯನವರ ಪ್ರತಿಮೆಗಳ ನಿರ್ವಹಣಾ ಸಮಿತಿ ವತಿಯಿಂದ ನಡೆದ ಎಚ್.ಡಿ.ಚೌಡಯ್ಯನವರ 97ನೇ ಜನ್ಮದಿನಾಚರಣ ಕಾರ್ಯಕ್ರಮದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಶ್ರೀ ಬಲಮುರಿ ಗಣಪತಿ ದೇವಸ್ಥಾನದ ಉದ್ಯಾನವನದಲ್ಲಿ ನಿರ್ಮಿಸಿರುವ ಡಾ.ಎಚ್.ಡಿ .ಚೌಡಯ್ಯನವರ ಪ್ರತಿಮೆಗೆ ಸಮಿತಿಯ ಪ್ರಧಾನ ಪೋಷಕರು ಹಾಗೂ ಮಾಜಿ ಶಾಸಕರಾದ ಎಚ್. ಬಿ.ರಾಮು, ಹಾಗೂ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷರಾದ ಹೆಚ್ .ಎಲ್. ಶಿವಣ್ಣನವರು ಎಚ್. ಡಿ. ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ 97ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಜರಿದ್ದ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷರಾದ ಎಚ್ ಎಲ್ ಶಿವಣ್ಣನವರು ಮಾತನಾಡಿದರು.
ಎಚ್. ಡಿ. ಚೌಡಯ್ಯನವರ ಹುಟ್ಟು ಹಬ್ಬದ ದಿನದಂದು ಸಮಾಜ ಸೇವೆ,ಮಾಡಿದಂತಹ ಹಾಗೂ ಅವರಿಗೆ ಪ್ರೀತಿ ಪಾತ್ರರಾದ ವ್ಯಕ್ತಿಗಳನ್ನ ಗುರುತಿಸಿ ಗ್ರಾಮದ ಅಭಿವೃದ್ಧಿಗೆ ಹಾಗೂ ದೇವಸ್ಥಾನಕ್ಕೆ ಹೆಚ್ಚಿನ ಆರ್ಥಿಕ ಸಹಾಯವನ್ನು ಮಾಡಿದಂತಹ ಹಾಗೂ ಸುದೀರ್ಘ 21 ವರ್ಷಗಳ ಸೇವೆ ಸಲ್ಲಿಸಿದಂತ ನಿವೃತ್ತ ಇಂಜಿನಿಯರ್ ಸಿದ್ದೇಗೌಡರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಎಚ್ .ಸಿ. ಹರಿಪ್ರಸಾದ್, ಎಚ್. ಎಂ. ವಿಜಯಕುಮಾರ್ , ಕಾರ್ಯದರ್ಶಿ ಲಿಂಗಪ್ಪ,ಸದಸ್ಯರಾದ ಎಚ್ .ಬಿ .ಶಿವಣ್ಣ , ಎಚ್ .ಸಿ.ಲಿಂಗರಾಜು,ಎಚ್. ಸಿ. ಮಾದಯ್ಯ,ಹೆಚ್.ಎಂ .ನಂದೀಶ್, ಹೆಚ್. ವೈ .ತಾಂಡವೇಶ್,ಎಚ್. ಎಂ. ನಾರಾಯಣಿ,ಎಚ್ ಟಿ. ರಾಮು,ಜಟ್ಟಿ ಕುಮಾರ್,ಎಚ್. ಸಿ. ಶ್ರೀಧರ್, ಎಚ್ .ಸಿ .ಮಂಜು,ಹಾಗೂ ಗ್ರಾಮದ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಹಿರಿಯ ಮುಖಂಡರು ಉಪಸ್ಥಿತರಿದ್ದರು.ನಂತರ ಅನ್ನಸಂತರ್ಪಣೆ ,ಸಿಹಿ ಹಂಚಲಾಯಿತು.
—————––ಕೆ.ಪಿ.ಕುಮಾರ್,ಹೊಳಲು .