ಮಂಡ್ಯ-ಪೊಲೀಸ್-ಇಲಾಖೆ-ಜನಸ್ನೇಹಿ-ಎಂದು-ಸಾರ್ವಜನಿಕರಿಗೆ- ಮನದಟ್ಟು-ಮಾಡಬೇಕಿದೆ-ಜಿಲ್ಲಾ-ಪೊಲೀಸ್-ವರಿಷ್ಠಾಧಿಕಾರಿ-ಮಲ್ಲಿಕಾರ್ಜುನ-ಬಾಲದಂಡಿ


ಮಂಡ್ಯ:
ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಪೊಲೀಸ್ ಇಲಾಖೆ ಜನಸ್ನೇಹಿ ಎಂದು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಹೇಳಿದರು.

ಇಂದು (ಎ.2) ನಗರದ ಜಿಲ್ಲಾ ಪೊಲೀಸ್ ಕವಾಯಾತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 1963 ರಲ್ಲಿ ಕರ್ನಾಟಕ ಪೊಲೀಸ್ ಧ್ವಜವನ್ನು ಅಧಿಕೃತವಾಗಿ ಅಂಗಿಕರಿಸಿ ಜಾರಿಗೆ ತರಲಾಯಿತು, ಅಂದಿನಿAದ ಇಂದಿನವರೆಗೂ ಎಪ್ರಿಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

2024 ರಲ್ಲಿ ಪೊಲೀಸ್ ಧ್ವಜವನ್ನು ಜಿಲ್ಲೆಯಲ್ಲಿ ಮಾರಟ ಮಾಡಿ ರೂ 22.50 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ, ಇಂದಿನವರೆಗೂ ಜಿಲ್ಲಾ ಪೊಲೀಸ್ ಖಾತೆಯ ಉಳಿತಾಯ ಠೇವಣಿಯ ಮೊತ್ತ ರೂ. 30.25 ಲಕ್ಷ ಉಳಿದುಕೊಂಡಿದೆ, ಸದರಿ ಮೊತ್ತವನ್ನು ನಿವೃತ್ತ ಪೊಲೀಸ್ ಹಾಗೂ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿಸಿದರು.

ಧ್ವಜ ದಿನಾಚರಣೆಯಲ್ಲಿ ಸಂಗ್ರಹವಾಗುವ ಹಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮೂಲಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ , ಎಸ್ ಎಸ್ ಎಲ್ ಸಿ. ಪಿ ಯು.ಪಿ. ಪದವಿ. ಸ್ನಾತಕೋತ್ತರ ಪದವಿ, ವೃತ್ತಿಪರ ಶಿಕ್ಷಣಗಳಲ್ಲಿ ಉನ್ನತ ಅಂಕಗಳನ್ನು ಪಡೆದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವುದು, ಪ್ರತಿ ತಿಂಗಳು (ಬಿ. ಎಂ. ಐ.) ಬಾಡಿ ಮಾಸ್ ಇಂಡೆಕ್ಸ್ ನಡಿ ಉತ್ತಮ ಆಹಾರ ವ್ಯಾಯಾಮ ಯೋಗಾಭ್ಯಾಸದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.


ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಪೊಲೀಸ್ ಸಿಬ್ಬಂದಿಗೆ ಬಹುಮಾನ ವಿತರಣಾ ಮಾಡಲಾಗುವುದು, ಪ್ರತಿ ವರ್ಷ ಪೊಲೀಸ್ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ನಡೆಸಿ ಆರೋಗ್ಯ ಕುರಿತು ಗಮನ ಹರಿಸಿಲಾಗುತ್ತಿದೆ, ವ್ಯದ್ಯಾಕೀಯ ಚಿಕಿತ್ಸೆ ಭರಿಸಬಹುದಾದ ವೆಚ್ಚ ಭರಿಸಲಾಗುತ್ತದೆ. ಪೊಲೀಸ್ ಇಲಾಖೆ ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸೋಣ ಎಂದು ಹೇಳಿದರು.

ನಿವೃತ ಆರಕ್ಷಕ ಉಪ ಅಧೀಕ್ಷಕರಾದ ಎಲ್.ಕೆ . ರಮೇಶ್ ರವರು ಮಾತನಾಡಿ ಪೊಲೀಸ್ ಧ್ವಜಕ್ಕೆ ತನ್ನದೇ ಆದ ಮಹತ್ವವಿದೆ ಯಾವುದೇ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯದಲ್ಲಿ ಲೋಪ ಎಸಗಿದರೆ ಅದು ಧ್ವಜಕ್ಕೆ ಮಾಡುವ ಅವಮಾನ, ಇಲಾಖೆಗೆ ಯಾವುದೇ ರೀತಿಯ ಕಳಂಕ ತೆರೆದಂತೆ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಿಸಿ ಎಂದರು.

ಸಭೆಯಲ್ಲಿ ಅಪಾರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ. ಈ ತಿಮ್ಮಯ್ಯ, ಎಸ್. ಈ ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?