ಮಂಡ್ಯ-ಲೋಕೋಪಯೋಗಿ ಇಲಾಖೆಯಿಂದ ಸುಮಾರು 5 ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ಪುಟ್ಟಿಕೊಪ್ಪಲು ಗ್ರಾಮದಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ಗುದ್ದಲಿ ಪೂಜೆ ನೆರವೇರಿಸಿದರು.
ಪುಟ್ಟಿಕೊಪ್ಪಲ್ ಗ್ರಾಮದಲ್ಲಿ ಗ್ರಾಮದೇವತೆ ಚಿಕ್ಕಮ್ಮ ದೇವಿ ಮಾರಮ್ಮನ ಹಬ್ಬ ಇರುವ ಕಾರಣ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರನ್ನು ಬಾರಿಗಾತ್ರದ ಗುಲಾಬಿ ಹಾರ ಹಾಕಿ ಗ್ರಾಮಕ್ಕೆ ಅಭಿಮಾನಿಗಳು,ಕಾರ್ಯಕರ್ತರು ಬರಮಾಡಿಕೊಂಡರು.
ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ಗ್ರಾಮದ ಮಾರಮ್ಮ ದೇವಿಯ ದರ್ಶನ ಪಡೆದು ನಂತರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಾ ಸುಮಾರು ಹಲವಾರು ವರ್ಷಗಳಿಂದ ಮೊಡಚಾಕನಹಳ್ಳಿ ಗ್ರಾಮದಿಂದ ಪುಟ್ಟಿಕೊಪ್ಪಲ್ ಗ್ರಾಮದವರೆಗೆ ರಸ್ತೆ ಕಾಮಗಾರಿ ಮಾಡಿರಲಿಲ್ಲ.ನಾನು ಚುನಾವಣೆ ವೇಳೆ ಈ ಗ್ರಾಮಕ್ಕೆ ಬಂದಾಗ ಗ್ರಾಮದ ಮುಖಂಡರು ನಮಗೆ ರಸ್ತೆ ,ಚರಂಡಿ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿಕೊಂಡರು. ಅದರಂತೆ ಈ ದಿನ ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಲೋಕೋಪಯೋಗಿ ಮಂತ್ರಿಗಳಾದ ಸತೀಶ್ ಜಾಕಿರವಳಿ, ಯತೀಂದ್ರ ಸಿದ್ದರಾಮಯ್ಯನವರ ಸಹಕಾರದಿಂದ 5 ಕೋಟಿಗಳ ರೂಗಳ ವೆಚ್ಚದಲ್ಲಿ ಹಣಗಳ ಬಿಡುಗಡೆ ಮಾಡಲು ಸಹಕರಿಸಿದ ಮಂತ್ರಿಗಳನ್ನ ಅಭಿನಂದಿಸಿ, ಈ ದಿನ ಈ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮದ ಕುಡಿಯುವ ನೀರು, ರಸ್ತೆ ಚರಂಡಿ, ಅಂಗನವಾಡಿ ಕಟ್ಟಡ, ಇನ್ನು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನ ಒಂದೊಂದಾಗಿ ಮಾಡುತ್ತೇನೆಂದು ಹೇಳಿದರು. ಹಾಗೂ ಸಾರ್ವಜನಿಕರು ಮತ್ತು ರಸ್ತೆ ಅಕ್ಕ ಪಕ್ಕದ ಜಮೀನಿನ ಮಾಲೀಕರುಗಳು ಸಹಕಾರ ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಚಂದಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಖಾ, ಮಾಜಿ ಅಧ್ಯಕ್ಷರಾದ ಡಿ. ಚಿಕ್ಕಯ್ಯ,
ಸದಸ್ಯ ನಿಂಗರಾಜು, ಬಸವರಾಜ ಹೆಗ್ಗಡೆ, ಮುಖಂಡರಾದ ಮರಿಗೌಡ, ಚಿಕ್ಕಮರಿಗೌಡ, ಕಾಳೇಗೌಡ, ಶಂಕರ್ ಮೋಡಚಾಕನಹಳ್ಳಿ, ಪಟೇಲ್ ಚಂದ್ರಶೇಖರ್, ಚಾರ್ವಿಕ ಸಂಸ್ಥೆಯ ಅಧ್ಯಕ್ಷ ಗಿರೀಶ್ ಮಾಚಳ್ಳಿ, ಪಟೇಲ್ ಸ್ವಾಮಿ, ಹಾಗೂ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್, ಸಹಾಯಕ ಇಂಜಿನಿಯರ್ ಜಗದೀಶ್, ಚಂದ್ರು ಶಿವಳ್ಳಿ, ಗುತ್ತಿಗೆದಾರರಾದ ಹರ್ಷ ಬೀರೇಗೌಡನಹಳ್ಳಿ, ಚಂದನ್ ಹೊಳಲು ಹಾಗೂ ಕಾರ್ಯಕರ್ತರುಗಳು, ಮುಖಂಡರುಗಳು ಹಾಜರಿದ್ದರು
– ಕೆ.ಪಿ.ಕುಮಾರ್, ಹೊಳಲು