ಮಂಡ್ಯ: ತಾಲೂಕಿನ ಬಸರಾಳು ಹೋಬಳಿಯ ಚೋಕನಹಳ್ಳಿ, ಹನಗನಹಳ್ಳಿ, ಬೇಬಿ, ಮಾಯಪ್ಪನಹಳ್ಳಿ ಹಾಗೂ ಚಿಕ್ಕಬಳ್ಳಿ ಗ್ರಾಮಗಳಲ್ಲಿ 1 ಕೋಟಿ 70 ಲಕ್ಷ ರೂ.ಗಳಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕಾಮಗಾರಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ಗೌಡ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಎಸ್.ಸಿ.ಪಿ ಮತ್ತು ಟಿ ಎಸ್.ಪಿ ಯೋಜನೆಯ ಅನುದಾನದಲ್ಲಿ ಚೋಕನಹಳ್ಳಿ ಗ್ರಾಮದ ಪರಿಶಿಷ್ಟಜಾತಿ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5೦.೦೦ ಹನಗನಹಳ್ಳಿ ಗ್ರಾಮದ ಪರಿಶಿಷ್ಟಜಾತಿ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರೂ., ಬೇಬಿ ಗ್ರಾಮದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರೂ. ಮಾಯಪ್ಪನಹಳ್ಳಿ ಗ್ರಾಮದ ಪರಿಶಿಷ್ಟಜಾತಿ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ರೂ. ಚಿಕ್ಕಬಳ್ಳಿ ಗ್ರಾಮದ ಪರಿಶಿಷ್ಟಜಾತಿ / ಪಂಗಡ ಕಾಲೋನಿಗೆ 50 ಲಕ್ಷ ಅನುದಾನ ನೀಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದು ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ತಿಂಗಳು 31ನೇ ತಾರೀಖಿನೊಳಗೆ ಮಂಡ್ಯ ನಗರದಲ್ಲಿ ಎಸ್ ಸಿ ಎಸ್ ಟಿ ಯೋಜನೆಯ ಅಡಿಯಲ್ಲಿ 8 ಕೋಟಿ ರೂ.ಗಳ ಅನುದಾನ ಮತ್ತು ಸಾಮಾನ್ಯ ಯೋಜನೆ ಅನುದಾನದಲ್ಲಿ ಗ್ರಾಮಾಂತರಕ್ಕಾಗಿ 10 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಮ್ಮ ಕೆ.ಡಿ.ಪಿ ಸದಸ್ಯ ಬಿ ರಮೇಶ್ ಮುಖಂಡರಾದ ದೊರೆಸ್ವಾಮಿ. ಪುನೀತ್ ಕುಮಾರ್,. ದ್ಯಾಪಸಂದ್ರ ಉಮೇಶ್ .ಕೃಷ್ಣ .ದ್ಯಾವಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.