ಮಂಡ್ಯ- ಜೀವನೋಪಯಕ್ಕೆ ಕೌಶಲ್ಯ ತರಬೇತಿಗಳನ್ನು ಪಡೆದು ತರಬೇತಿಗಳ ಸದುಪಯೋಗ ಪಡೆಯುವಂತೆ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ನಗರದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಳೂರು, ಜಿಲ್ಲಾ ಕೌಶಲ್ಯ ಮಿಷನ್, ಮಂಡ್ಯ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಡ್ಯ ಹಾಗೂ ಮಂಡ್ಯ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದರು.

ಕೌಶಲ್ಯ ತರಬೇತಿಯನ್ನು ಪಡೆದಲ್ಲಿ ನಿಮ್ಮ ಜೀವನದಲ್ಲಿ ಕೌಶಲ್ಯವನ್ನು ರೂಪಿಸಿಕೊಳ್ಳಬಹುದು, ಇದರಿಂದ ಜೀವನ ನಿರ್ವಹಣೆಗೆ ಅನುಕೂಲಕರವಾಗಲಿದೆ, ಉದ್ಯೋಗ ದೊರಕುವ ಆತ್ಮ ವಿಶ್ವಾಸ ಹೆಚ್ಚಗಲಿದೆ, ಇಂತಹ ತರಬೇತಿಯಿಂದ ನಿಮಗೆ ಸಂದರ್ಶನಗಳನ್ನು ಯಾವ ರೀತಿ ಎದುರಿಸುವುದು ಎಂದು ತಿಳಿಯಲಿದೆ ಹಾಗೂ ಯಾವುದಾದರು ಒಂದು ಕಂಪನಿಯಲ್ಲಿ ಉದ್ಯೋಗವನ್ನು ಪಡೆಯಲು ಸಹಕಾರಿಯಾಗಲಿದೆ ಮತ್ತು ತಾಂತ್ರಿಕವಾಗಿ ಕೆಲಸ ನಿರ್ವಹಿಸಲು ಸುಲಭವಾಗಲಿದೆ ಎಂದು ತಿಳಿಸಿದರು.
ಇಂದು ನೂರಕ್ಕೆ ನೂರರಷ್ಟು ಶಿಕ್ಷಣವನ್ನು ನೀಡಬೇಕೆಂಬುದು ಸರ್ಕಾರದ ಆಶಯ ಸರ್ಕಾರ, ಖಾಸಗಿ ಸಂಸ್ಥೆಗಳು ಹಾಗೂ ಮಠಗಳು ಶಿಕ್ಷಣವನ್ನು ನೀಡುತ್ತಿವೆ. ವಿದ್ಯೆಯ ಜೊತೆಗೆ ಬುದ್ದಿ ಮತ್ತು ಜ್ಞಾನವನ್ನು ಬೆಳಿಸಿಕೊಂಡು ಸ್ವಯಂ ಉದ್ಯೋಗವನ್ನು ಮಾಡಲು ನೀವು ಮುಂದೆ ಬರಬೇಕು, ಇಂದು ಸ್ವಯಂ ಉದ್ಯೋಗ ಮಾಡಲು ಸರ್ಕಾರದಲ್ಲಿ ಅನೇಕ ಸೌಲಭ್ಯಗಳನ್ನು ದೊರೆಯುತ್ತಿದ್ದು ಅದನ್ನು ಸದುಪಯೋಗಪಡೆಸಿಕೊಳ್ಳುವಂತೆ ತಿಳಿಸಿದರು.
ಡಿಸೆಂಬರ್ ಮಾಹೆಯ ಒಳಗೆ ಎಳು ತಾಲ್ಲೂಕಿನ ನಿರುದ್ಯೋಗಿಗಳಿಗೆ ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಏರ್ಪಡಿಸಲು ಉದ್ದೇಶಿಲಾಗಿದೆ , ಇಂತಹ ಉದ್ಯೋಗ ಮೇಳ ದಿಂದ ಯಾರಿಗಾದರು ಉದ್ಯೋಗ ದೊರತಲಿ ಆ ಕಾರ್ಯಕ್ರಮ ಸಫಲತೆಯನ್ನು ಕಂಡಿದೆ ಎಂದರು. ಉದ್ಯೋಗ ಮೇಳದಲ್ಲಿ 30 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು 400 ಕ್ಕೂ ಹೆಚ್ಚು ನಿರುದ್ಯೋಗಿಗಳು ಈ ಉದ್ಯೋಗ ಮೇಳದಲ್ಲಿ ನೊಂದಾಯಿಸಿಕೊAಡಿದ್ದಾರೆ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಪಿ.ರವಿಕುಮಾರ್, ಮಂಡ್ಯ ವಿಶ್ವವಿದ್ಯಾಲಯದ ಉಪ ಕುಲಪತಿ ಶಿವಚಿತ್ತಪ್ಪ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹಾಗೂ ಇತರರು ಉಪಸ್ಥಿತರಿದ್ದರು.
ಖಾದಿ ಉತ್ಸವ -2025ಕ್ಕೆ ಚಾಲನೆ:- ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮಾದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ- ಖಾದಿ ಉತ್ಸವ -2025 ಕ್ಕೆ ಕೃಷಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ರವರು ಗಾಂಧಿ ಪ್ರತಿಮೆಗೆ ಹಾರ ಹಾಕಿ ಖಾದಿ ಮೇಳಕ್ಕೆ ಚಾಲನೆ ನೀಡಿದರು. ನಂತರ ಖಾದಿ ಮಳಿಗೆಗಳಿಗೆ ಭೇಟಿ ನೀಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಖಾದಿ ಮಂಡಳಿಯ ನಿರ್ದೇಶಕರುಗಳು , ಖಾದಿ ಗ್ರಾಮೋದ್ಯಮದ ಅಧಿಕಾರಿಗಳು ಉಪಸ್ಥಿತರಿದ್ದರು.