ಮಂಡ್ಯ-ಶ್ರೀ-ದೊಡ್ಡಯ್ಯ-ಸ್ವಾಮಿ-ಬಸವ-ಇನ್ನಿಲ್ಲ


ಮಂಡ್ಯ- ತಾಲೂಕು ಹೊಳಲು ಗ್ರಾಮದ ಶ್ರೀ ದೊಡ್ಡಯ್ಯ ಸ್ವಾಮಿ ದೇವಸ್ಥಾನದ ದೇವರ ಬಸವ ಇಂದು ನಿಧಾನವಾಗಿದೆ.
ಇತ್ತೀಚಿಗೆ  ಅನಾರೋಗ್ಯದಿಂದ ಬಳಲುತ್ತಿದ್ದ ಬಸವ ಈ ದಿನ ಅಸುನೀಗಿದ್ದು.

ಹೊಳಲು ಹಾಗೂ ಅಕ್ಕಪಕ್ಕದ ಗ್ರಾಮದವರಿಗೆ  ತುಂಬಲಾಗದ ನಷ್ಟವಾಗಿದೆ. ಶ್ರೀ ದೊಡ್ಡಯ್ಯ ಸ್ವಾಮಿ ದೇವರ ಬಸವ ಸುಮಾರು 18 ವರ್ಷಗಳ ಕಾಲ ಒಳ್ಳೆಯ ಪೂಜೆ ಕೈಂಕಾರಗಳನ್ನು ಮಾಡುತ್ತಾ ಒಳ್ಳೆಯ ಹೆಸರನ್ನು ಗಳಿಸಿದೆ.

ಬಸವನ ಶವಸಂಸ್ಕಾರ ಮಾಡಲು ಟ್ರ್ಯಾಕ್ಟರ್ ಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿ ಚಿಕ್ಕ ತಮ್ಮನಹಳ್ಳಿ ಗ್ರಾಮದಲ್ಲಿ ದೇವರಗುಡ್ಡಪ್ಪಂದಿರು ಪೂಜಾ ವಿಧಿವಿಧಾನ ನೆರವೇರಿಸಿ , ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ನಗರಿ ವಾದ್ಯಗಳೊಂದಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ (ಶ್ರೀ ದೊಡ್ಡಯ್ಯ ಸ್ವಾಮಿ ದೇವಸ್ಥಾನದ ಬಸವ ವಾದ್ದರಿಂದ) ಶ್ರೀ ದೊಡ್ಡಯ್ಯ ಸ್ವಾಮಿ  ದೇವಸ್ಥಾನದ  ಆವರಣದಲ್ಲಿ ಸಂಜೆ 6:00 ಸಮಯದಲ್ಲಿ ಅಂತ್ಯಕ್ರಿಯೆಯನ್ನು ಮಾಡಲಾಯಿತು. ಗ್ರಾಮದ ಮಹಿಳೆಯರು ಮಕ್ಕಳು ಬಸಪ್ಪನಿಗೆ ಪೂಜೆ ಮಾಡಿ ದರ್ಶನ ಪಡೆದರು.

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ, ಮಾಜಿ ಶಾಸಕ ಎಚ್.ಬಿ.ರಾಮು, ಮುಖಂಡ
ಎಚ್.ಸಿ.ಹರಿಪ್ರಸಾದ್, ವಿಜಯಕುಮಾರ್, ಬಸಪ್ಪನ ದರ್ಶನ ಮಾಡಿದರು.

ಶ್ರೀ ದೊಡ್ಡಯ್ಯ ಸ್ವಾಮಿ ದೇವಸ್ಥಾನದ ಪದಾಧಿಕಾರಿಗಳಾದ ಶಂಕರ್ ಪೂಜಾರಿ,  ಸದಾನಂದ, ತಮ್ಮಣ್ಣ, ಹಾಗೂ
ಎಚ್. ಮಲ್ಲಿಗೆರೆ ಗಡಿಕಾರರು, ಒದೆ ಸಮುದ್ರದ ಗಡಿಕಾರರು, ಹೊಳಲು ಗಡಿಕಾರರು, ಹಾಗೂ ಬೀರೇಗೌಡನಹಳ್ಳಿ, ತಂಡಸನಹಳ್ಳಿ, ಮಲ್ಲನಾಯಕನ ಕಟ್ಟೆ, ಗ್ರಾಮಸ್ಥರು, ಮತ್ತು ಶ್ರೀ ಬಸಪ್ಪ ದೇವರ ಭಕ್ತಾದಿಗಳು ಉಪಸ್ಥಿತರಿದ್ದರು.

– ಕೆ.ಪಿ ಕುಮಾರ್, ಹೊಳಲು

Leave a Reply

Your email address will not be published. Required fields are marked *

× How can I help you?