ಮಂಡ್ಯ -ಶ್ರೀ ವೆಂಕಟೇಶ್ವರ- ವಿದ್ಯಾನಿಕೇತನ-ಶಾಲೆಯಲ್ಲಿ-ಗಣಪತಿ- ಹೋಮ-ಹಾಗೂ-ಶಾರದಾ-ಪೂಜೆ-ಕಾರ್ಯಕ್ರಮ

ಮಂಡ್ಯ – ತಾಲೂಕು ಹೊಳಲು ಗ್ರಾಮದ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ (ಅಭಿನವ ಭಾರತಿ ಶಿಕ್ಷಣ ಟ್ರಸ್ಟ್ ,ರಿ. ಮಂಡ್ಯ) ಶಾಲೆಯಲ್ಲಿ ಶ್ರೀ ಗಣಪತಿ ಹೋಮ ಹಾಗೂ ಶಾರದ ಪೂಜೆ ಕಾರ್ಯಕ್ರಮವಿಂದು ನಡೆಯಿತು.


 ಶಾಲೆಯ ಮುಖ್ಯೋಪಾಧ್ಯಾಯರಾದ  ಸಿ.ಜೆ ಜವರೇಗೌಡ ರವರು ಪೂಜೆಯ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿ, ನಂತರ ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರತಿವರ್ಷದಂತೆ ಈ ದಿನ ಗಣಪತಿ ಹೋಮ, ಶಾರದ  ಪೂಜೆ  ಹಮ್ಮಿಕೊಂಡಿದ್ದೇವೆ . ಶ್ರೀ ಅನಂತಕುಮಾರ್ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಹಾಗೂ ಅಭಿನವ ಭಾರತ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಶಿವಮೂರ್ತಿ ಕೀಲಾರರವರ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಆಧ್ಯಾತ್ಮಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಒಂದು ಶುಭ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಮುಂದೆ ಬರುವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಗ್ರಾಮಕ್ಕೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಒಳ್ಳೆ ಹೆಸರು ತರಲೆಂದು ಹಾಗೂ ಇಲ್ಲಿ ವಿದ್ಯಾಭ್ಯಾಸ ಮಾಡಿದಂತಹ ವಿದ್ಯಾರ್ಥಿಗಳು ಹೊರದೇಶಗಳಲ್ಲಿ ಒಳ್ಳೆಯ  ಕೆಲಸದಲ್ಲಿದ್ದಾರೆಂದು, ಆದ್ದರಿಂದ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಡಬೇಕೆಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.


ದೇವತಾ ಕಾರ್ಯಕ್ರಮವನ್ನು ಶ್ರೀ ತಾಂಡವೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪ್ರದೀಪ್ ದೀಕ್ಷಿತ್ ಹಾಗೂ ಮಂಜುನಾಥ್ ದೀಕ್ಷಿತ್ ನೆರವೇರಿಸಿಕೊಟ್ಟರು.


ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ  ಸಿ.ಜೆ. ಜವರೇಗೌಡ,  ವೀಣಾ ಆಡಳಿತ ಅಧಿಕಾರಿಯಾದ ಸುಮಾ, ಸಂಯೋಜಕರಾದ ಶೋಭಾ, ಶಿಕ್ಷಕರಾದ ಕುಸುಮ, ಪ್ರಸನ್ನ ಕುಮಾರ್, ಹಾಗೂ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.


– ಕೆ.ಪಿ.ಕುಮಾರ್ ಹೊಳಲು

Leave a Reply

Your email address will not be published. Required fields are marked *

× How can I help you?