ಮಂಡ್ಯ- ಗ್ರಾಮದಲ್ಲಿರುವ ಪರಿಸರ, ಜೀವವೈವಿದ್ಯತೆ, ಜಲಾನಯನ ಅಭಿವೃದ್ಧಿ, ವನ್ಯ ಜೀವಿಸಂರಕ್ಷಣೆ, ವಿಪತ್ತು ನಿರ್ವಹಣೆ, ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಗ್ರಾಮ ಪರಿಸರ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಹಾಗೂ ಎಫ್ ಇ ಎಸ್ ಸಂಸ್ಥೆ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ಗ್ರಾಮ ಪರಿಸರ ಅಭಿವೃದ್ಧಿ ಮತ್ತು ನಿರ್ವಹಣೆಯ ಬಗ್ಗೆ ಸಮುದಾಯ ಸಂವಹನ ಕಾರ್ಯಕ್ರಮವನ್ನು ಮಂಡ್ಯ ತಾಲ್ಲೂಕು ಪಂಚಾಯತ್ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಮಂಡ್ಯ ವೀಣಾ ಎಂ ಎಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉತ್ತಮ ಪರಿಸರವನ್ನು ಉಳಿಸಿ ಕೊಳ್ಳಬೇಕಾದರೆ ಸಮುದಾಯದ ಆಸ್ತಿಗಳಾದ ನೀರಿನ ಮೂಲಗಳು, ಕೆರೆ, ಕಟ್ಟೆ, ಗೋಮಾಳ, ಸ್ಮಶಾನ, ಗುಂಡುತೋಪುಗಳನ್ನು ಅಭಿವೃದ್ಧಿ ಪಡಿಸಿ ಕೊಳ್ಳಬೇಕಾಗಿದೆ. ಇವುಗಳ ಅಭಿವೃದ್ಧಿಗಾಗಿ ನಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಮೂಲಕ ಸಮುದಾಯದ ಭಾಗವಹಿಸಿವಿಕೆಯಿಂದ ಅಭಿವೃದ್ಧಿ ಮಾಡಬೇಕು ಎಂದರು.

ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ ಚಂದ್ರ ಗುರು, ಮಾತನಾಡಿ ಗ್ರಾಮ ಪರಿಸರ ಅಭಿವೃದ್ಧಿ ಮತ್ತು ನಿರ್ವಹಣೆಯ ಸಮಿತಿಯು ನಿರ್ವಹಿಸಬೇಕಾದ ಜವಾಬ್ದಾರಿಗಳು ಮತ್ತು ವಿವಿಧ ಇಲಾಖೆಗಳ ಸಮನ್ವಯತೆ ಸಾಧಿಸಿ ಸಾಮೂಹಿಕ ಆಸ್ತಿಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ನಾವು ರಕ್ಷಣೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಶ್ರೀ ಭೀಮಾ ನಾಯಕ್ ಎಫ್‌ಇಎಸ್ ಸಂಸ್ಥೆರವರು ಗೋಮಾಳದ ಉಪಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಮಲ್ಲೇಶ್ ಸಹಾಯಕ ನಿರ್ದೇಶಕರು, ಗ್ರಾಮೀಣ ಉದ್ಯೋಗ ತಾಲ್ಲೂಕು ಪಂಚಾಯತ್, ಶ್ರೀಧರ್ ಬಿ ವಿ ಸಹಾಯಕ ನಿರ್ದೇಶಕರು, ಪಂಚಾಯತ್ ರಾಜ್ ಮಂಡ್ಯ, ಕೃಷ್ಣೇಗೌಡ, ಅಧ್ಯಕ್ಷರು ಜನರಕ್ಷ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಂಡ್ಯ, ರವಿಕುಮಾರ್ ಎಂಎಲ್ ತಾಂತ್ರಿಕ ಸಂಯೋಜಕರು, ಹಾಗೂ ಜೀವನ್, ಪಿಡಿಒ ಮುದಗಂದೂರು, ರಾಮಕೃಷ್ನ, ಪಿಡಿಒ ಶಿವಪುರ, ಪ್ರದೀಪ್ ಪಿಡಿಒ ಬೇವುಕಲ್ಲು, ಉಪಸ್ಥಿತರಿದ್ದರು.