ಮಂಡ್ಯ-ಹೊಳಲು ಗ್ರಾಮದ ಶ್ರೀ ತಾಂಡವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಸೋಮವಾರ ಪ್ರಯುಕ್ತ ಶ್ರೀ ತಾಂಡವೇಶ್ವರಸ್ವಾಮಿಗೆ ವಿಶೇಷವಾಗಿ ಹೂವಿನ ಅಲಂಕಾರ ಹಾಗೂ ವಜ್ರಲಂಕಾರ ಮಾಡಿ ಕ್ಷೀರಾಭಿಷೇಕ, ರುದ್ರಾಭಿಷೇಕ,ಕುಂಕುಮಾರ್ಚನೆ ನಡೆಸಲಾಯಿತು.ಶ್ರೀಪಾರ್ವತಿ ದೇವಿ,ನಾಗರಕಲ್ಲು ,ಶ್ರೀಲಕ್ಷ್ಮಿವೆಂಕಟೇಶ್ವರ ದೇವರುಗಳಿಗೆ ವಿಶೇಷ ಪೂಜೆಯನ್ನ ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ದೀಕ್ಷಿತ್ ಮಾತನಾಡಿ,ಕರ್ನಾಟಕದಲ್ಲಿ ಶ್ರೀ ತಾಂಡವೇಶ್ವರ ಸ್ವಾಮಿಯ ದೇವಸ್ಥಾನ ಹೊಳಲು ಗ್ರಾಮದಲ್ಲಿ ಇರುವುದು ವಿಶೇಷವಾಗಿದೆ.ರಾಜ್ಯದ ಬೇರೆಯ ಜಿಲ್ಲೆಗಳಿಂದ ಹಾಗೂ ದೂರದ ಊರುಗಳಿಂದ ಇಲ್ಲಿಗೆ ಬಂದು ಪೂಜೆ ನೆರವೇರಿಸಿಕೊಂಡು ಹೋಗುತ್ತಾರೆ.ತಾಂಡವೇಶ್ವರಸ್ವಾಮಿಯನ್ನು ಮನಸ್ಸಿನಲ್ಲಿಟ್ಟು ಪೂಜೆ ಮಾಡಿದರೆ ಅವರ ಇಷ್ಟಾರ್ಥ ಸಿದ್ಧಿ ಆಗುತ್ತದೆ.ಈ ದಿನ ಪೂಜೆಯನ್ನು ಮಾಡಿದರೆ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ತಂಡಸನಹಳ್ಳಿ ಗ್ರಾಮದ ಟಿ .ಎಸ್. ಮೋಹನ್ ಕುಟುಂಬ ವರ್ಗದ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಅರ್ಚಕರಾದ ಪ್ರದೀಪ್ ದೀಕ್ಷಿತ್ , ಮನು ದೀಕ್ಷಿತ್ ಹಾಗೂ ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹೆಚ್. ಬಿ. ರಾಮು, ಎಚ್. ಎಲ್. ಶಿವಣ್ಣ , ಮಾತೃಶ್ರೀ ಶಂಕರ, ಪುಟ್ಟಸ್ವಾಮಿ, ಶಂಕರ್ ಪೂಜಾರಿ,ಶ್ರೀ ತಾಂಡವಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಚ್ .ಎಸ್ .ಮೋಹನ್ ಕುಮಾರ್, ಉಪಾಧ್ಯಕ್ಷರಾದ ಹೆಚ್. ಬಿ.ದೊಡ್ಡೇಗೌಡ, ಕಾರ್ಯದರ್ಶಿ ಎಸ್. ಕೃಷ್ಣ, ಹಾಗೂ ಸದಸ್ಯರುಗಳಾದ ಚಿಕ್ಕೇಗೌಡ , ಶಿವಣ್ಣ , ಶಿವಲಿಂಗಯ್ಯ, ಅನುಸೂಯ, ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿವರ ಉಮೇಶ್ ತಂಡದ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
—————--ಕೆ.ಪಿ.ಕುಮಾರ್,ಹೊಳಲು.