ಮಂಡ್ಯ: 12 ನೇ ಶತಮಾನದಲ್ಲಿ ವಚನ ಸಾಹಿತ್ಯದಲ್ಲಿ ಸಾಮಾಜಿಕವಾದ ಮತ್ತು ಧಾರ್ಮಿಕವಾದ ಒಂದು ದೊಡ್ಡ ಕ್ರಾಂತಿಯನ್ನು ಉಂಟು ಮಾಡುವಲ್ಲಿ ಶರಣರ ಪಾತ್ರ ದೊಡ್ಡದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್ , ಮಂಡ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾಯಕರ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದರು.
ಅಕ್ಷರವನ್ನು ತಿಳಿಯದಂತಹ ಜನರಿಗೆ ಅವರದೇ ಭಾಷೆಯಲ್ಲಿ ಸಾಹಿತ್ಯವನ್ನು ಸರಳವಾಗಿ ಅವರಿಗೆ ತಿಳಿಸುವ ಮೂಲಕ ಒಂದು ಹೊಸ ಭಾಷೆಯ ಕ್ರಾಂತಿಯನ್ನು ಉಂಟು ಮಾಡಿದಂತಹ ಅನೇಕ ಶರಣರಿದ್ದಾರೆ. ಅಂದು ಅನೇಕ ಶರಣರು ಅನೇಕ ವಿಚಾರಗಳ ಕುರಿತು ಜನರಿಗೆ ತಿಳಿಸುವಂತಹ ಕಾರ್ಯವನ್ನು ಮಾಡಿದ್ದಾರೆ , ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಶರಣುರುಗಳು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಇಂದಿನ ಮಕ್ಕಳಿಗೆ ತಿಳಿಸಿದಲ್ಲಿ ಮಾತ್ರ ಆದರ್ಶ ಜೀವನ ನಡೆಸಲು ಸಾಧ್ಯವೆಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಾಧಿಕಾರಿ ನಂದಿನಿ ರವರು ಮಾತನಾಡಿ ಕಾಯಕ ಶರಣರನ್ನು ನಾವು ನೆನೆಸಿಕೊಳ್ಳುತ್ತಿರುವುದು ಅವರು ಮಾಡಿರುವ ಕೆಲಸಗಳಿಂದ, ಕಾಯಕವನ್ನು ನಾವು ಎಷ್ಟು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ ಹಾಗೂ ನಾವು ಮಾಡುವ ಒಳ್ಳೆ ಕಾಯಕ ನಮಗೆ ಗೌರವ ತಂದು ಕೊಡುತ್ತದೆ, ನಮಗೆ ಸಿಕ್ಕಂತಹ ಕಾಯಕವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ನಿವೃತ ಕನ್ನಡ ಪ್ರಾಧ್ಯಾಪಕರಾದ ಮಹದೇವರವರು ಕಾಯಕ ಶರಣರುಗಳಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ್ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಇವರುಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರುಗಳು, ಜಿಲ್ಲಾಧಿಕಾರಿಗಳ ಕಚೇರಿ ಸಹಾಯರಾದ ಡಾ. ರೋಹಿಣಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಂದೀಶ್ ಹಾಗೂ ಇತರರು ಉಪಸ್ಥಿತರಿದ್ದರು.