ಮಂಡ್ಯ.ಮೇ.27:- ಮಿಮ್ಸ್ ನ ಕೀಲು ಮತ್ತು ಮೂಳೆ ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು, ಪುರುಷರು ಹಾಗೂ ಮಕ್ಕಳ ವಾರ್ಡ್ ಗಳಿಗೆ ಇಂದು ಭೇಟಿ ನೀಡಿದ ಉಪಲೋಕಾಯುಕ್ತರು ರೋಗಿಗಳ ಬಳಿ ಹೋಗಿ ಆರೋಗ್ಯ ವಿಚಾರಿಸಿದರು.
ಮಿಮ್ಸ್ ನಲ್ಲಿ ನೀಡಲಾಗುತ್ತಿರುವ ಸೇವೆ ಔಷಧೋಪಚಾರ, ಕುಡಿಯುವ ನೀರು ಶೌಚಾಲಯದ ಸ್ವಚ್ಛತೆ, ಹೊರ ರೋಗಿಗಳಿಗೆ ಇರುವ ತೊಂದರೆಗಳು ಕುರಿತಂತೆ ಮಿಮ್ಸ್ ನಲ್ಲಿದ್ದ ರೋಗಿಗಳಿಂದ ಮಾಹಿತಿ ಪಡೆದುಕೊಂಡರು.

ನAತರ ಔಷಧಿವಿತರಣಾ ಕೇಂದ್ರ, ಪಾರ್ಕಿಂಗ್ ಅಂಬೂಲೆನ್ಸ್ ಸೇವೆ ಕುರಿತು ಪರಿಶೀಲಿಸಿದ ನಂತರ ಸ್ಥಳದಲ್ಲೇ ಪಾರ್ಕಿಂಗ್ ಗಾಗಿ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಹಾಗೂ ಔಷಧಿಗಳನ್ನು ಹೊರಗಡೆ ಮೆಡಿಕಲ್ ಸ್ಟೋರ್ ಗಳಿಗೆ ಬರೆದು ಕೊಡುತ್ತಿದ್ದಾರ ಎಂದು ರೋಗಿಗಳ ಬಳಿ ಪ್ರಶ್ನಿಸಿದರು.

ಆಸ್ಪತ್ರೆಯಲ್ಲಿರುವ ಕ್ಯಾಂಟೀನ್ ನಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಕುರಿತು ಪರಿಶೀಲಿಸಿದ ಲೋಕಾಯುಕ್ತರು ಪ್ರತಿ ಆಹಾರ ಪದಾರ್ಥ ಮಾರಾಟ ಕುರಿತು ಬೆಲೆಯ ವಿವರ ಅನಾವರಣ ಮಾಡಬೇಕು ಎಂದರು.

ಸ್ಥಳದಲ್ಲೇ ಆಹಾರ ಸುರಕ್ಷಾ ಅಧಿಕಾರಿಗಳಿಗೆ ಕರೆ ಮಾಡಿ ಕ್ಯಾಂಟೀನ್ ನಲ್ಲಿ ಮಾರಾಟ ಮಾಡುತ್ತಿರುವ ವಸ್ತುಗಳ ಬಗ್ಗೆ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.