ಮಂಡ್ಯ– ನಗರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಆರಂಭಿಸಿರುವ ಧರಣಿ ಸತ್ಯಾಗ್ರಹವು ಸೋಮವಾರವೂ ಮುಂದವರಿಯಿತು. ಧರಣಿಗೆ ಮಂಡ್ಯ ಜಿಲ್ಲಾ ಗ್ರಾಮ ಪಂಚಾಯಿತಿ ಒಕ್ಕೂಟದ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಧರಣಿಯಲ್ಲಿ ಜಿಲ್ಲಾ ಗ್ರಾಮ ಪಂಚಾಯಿತಿ ಒಕ್ಕೂಟದ ಗೌರವಾಧ್ಯಕ್ಷ ಬೇವಿನಹಳ್ಳಿ ಮಹೇಶ್, ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್ ಉಪ್ಪುರಕನಹಳ್ಳಿ, ಒಕ್ಕೂಟದ ಅಧ್ಯಕ್ಷ ಪ್ರದೀಪ್ ಸಿದ್ದೇಗೌಡ, ಬೇಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುವರ್ಣಾವತಿ, ಕಾರ್ಯದರ್ಶಿ ಕೆಂಪೇಗೌಡ ಬೂದುನೂರು, ಚಾಮರಾಜು, ಬಸವರಾಜು, ಕೆಂಚನಹಳ್ಳಿ ರಾಜು, ಕಾಂತರಾಜು, ರಮೇಶ್, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಕುಮಾರ್, ಸಿದ್ದಪ್ಪ, ಗುಣಶೇಖರ್, ಚರಣ್, ಕೃಷ್ಣೇಗೌಡ, ಭಾಗವಹಿಸಿದ್ದರು.
………..