ಮಂಡ್ಯ-ಆದಷ್ಟು ಬೇಗ-ಶಿಕ್ಷಕರ-ಸಮಸ್ಯೆಯನ್ನು-ಬಗೆಹರಿಸುತ್ತೇವೆ- ಎನ್. ಚೆಲುವರಾಯಸ್ವಾಮಿ


ಮಂಡ್ಯ.:- ಶಿಕ್ಷಣದ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಶಿಕ್ಷಣ ಇಲಾಖೆ ಸಚಿವರೊಂದಿಗೆ ರ‍್ಚಿಸಿ ಸಾಧ್ಯವಾದಷ್ಟು ಶೀಘ್ರವಾಗಿ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.

ಇಂದು (ಮಾ.೧) ರಂದು ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನ ಮಾತೆ “ಸಾವಿತ್ರಿಬಾಯಿ ಫುಲೆ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಿಗೆ ಜವಾಬ್ದಾರಿ ಹೆಚ್ಚಿದೆ ಕಾಲ ಕಾಲಕ್ಕೆ ತಕ್ಕಂತೆ ಶಿಕ್ಷಕರು ತಮ್ಮಲ್ಲಿ ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ಸಾಮಾನ್ಯ ಜ್ಞಾನ, ಸಾಮಾಜದ ಸ್ಥಿತಿಗತಿಗಳನ್ನು ರ‍್ಥಪರ‍್ಣವಾಗಿ ರ‍್ಥ ಮಾಡಿಸಬೇಕು, ಶಾಲೆಯಲ್ಲಿ ಅಭ್ಯಾಸಿಸುತ್ತಿರುವ ಮಕ್ಕಳನ್ನೆಲ್ಲ ಶಿಕ್ಷಕರು ತಮ್ಮ ಮಕ್ಕಳೆಂಬ ಭಾವನೆಯಿಂದ ನೋಡಿಕೊಳ್ಳಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ನೀಡಿ. ಮುಂದಿನ ದಿನಗಳಲ್ಲಿ ಅವರಲ್ಲಿ ಸಮಾಜದಲ್ಲಿರುವ ಇರುವ ತಪ್ಪುಗಳನ್ನು ತಿದ್ದುವ ಸಾರ‍್ಥ್ಯ ಬೆಳೆಯಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ರ‍್ಕಾರ ಮೊದಲ ಆದ್ಯತೆ ನೀಡಿ ಎಂದು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ ಜಗತ್ತಿನಲ್ಲಿ ಶಿಕ್ಷಣ ಹಾಗೂ ಜ್ಞಾನವೆಂಬುದು ನಿರಂತರವಾಗಿ ಆಸಕ್ತರ ಆಸ್ತಿಯಾಗಿರುತ್ತದೆ. ಕದಿಯಲು ಸಾಧ್ಯವಾಗದ ಸಂಪತ್ತು ಶಿಕ್ಷಣ, ಅಂತಹ ಶಿಕ್ಷಣವನ್ನು ನೀಡಲು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ, ಶಿಕ್ಷಕರು ಯಾವುದೇ ಭಯಪಡದೆ ಕರ‍್ಯ ನರ‍್ವಾಹಿಸಿ ಮುಖ್ಯಮಂತ್ರಿಗಳು ನಿಮ್ಮ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಲಿಖಿತವಾಗಿ ದಾಖಲಿಸಿದ್ದಾರೆ, ಸಾಧ್ಯವಾದಷ್ಟು ಬೇಗ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಾಗುವುದು.

f

ಶಿಕ್ಷಕರಿಗೆ ಇರುವ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದೆ, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಕರು ದುಡುಕಿ ಯಾವುದೇ ನರ‍್ಧಾರ ತೆಗೆದುಕೊಳ್ಳಬೇಡಿ, ಉತ್ತಮ ಶಿಕ್ಷಕರು ರ‍್ಕಾರಿ ಶಾಲೆಗಳಲ್ಲಿ ದ್ದಾರೆ ಎಂಬುದನ್ನು ಉತ್ತಮ ಫಲಿತಾಂಶ ನೀಡಿ ನಿರೂಪಿಸಿ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಅನುಮೋದನೆಯನ್ನು ಮುಖ್ಯ ಮಂತ್ರಿಗಳು ನೀಡಿದ್ದಾರೆ, ಈ ಭಾರಿ ಸುಮಾರು ೧೫ ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಹೋರಾಟ ಮಂಡ್ಯದಲ್ಲಿಯೇ ನಿಲ್ಲಬೇಕು, ಸಾಧ್ಯವಾದಷ್ಟು ಶೀಘ್ರವಾಗಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುತ್ತೇನೆ, ಶಿಕ್ಷಕರ ಪರವಾಗಿ ಸರ್ಕಾರ ಇದೆ ಎಂದು ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ರ‍್ಶನ್ ಪುಟ್ಟಣ್ಣಯ್ಯ ಅವರು ಮಾತನಾಡಿ ಶಿಕ್ಷಣ ವೃತ್ತಿಯಿಂದ ಮಾತ್ರ ಹಲವು ವೃತ್ತಿಗಳನ್ನು ಹುಟ್ಟುಹಾಕಲು ಸಾಧ್ಯ, ರ‍್ಕಾರಿ ಶಾಲೆಗಳನ್ನು ಉನ್ನತೀಕರಿಸುವ ಹೊಣೆ ನಮ್ಮೇಲ್ಲರ ಮೇಲೆ ಇದೆ, ರ‍್ಕಾರಿ ಶಾಲೆಗಳ ಮೇಲೆ ಜನರಿಗೆ ಇರುವ ತಾತ್ಸಾರ ಭಾವನೆ ಹೋಗಲಾಡಿಸಬೇಕು, ಖಾಸಗಿ ಶಾಲೆಗಳಂತೆ ರ‍್ಕಾರಿ ಶಾಲೆಗಳಲ್ಲೂ ಸಹ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ತಿಳಿಸಿದರು.

f

ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಶಿಕ್ಷಕರು ಸದಾ ಕ್ರಿಯಾಶೀಲವಾಗಿ ಕರ‍್ಯ ನರ‍್ವಾಹಿಸಬೇಕು ಹಾಗೀ ತಮ್ಮ ಆರೋಗ್ಯದ ಕಡೆ ಗಮನಹರಿಸಿ, ಪುಸ್ತಕದ ಪಾಠವನ್ನು ಎಲ್ಲರೂ ಮಾಡ್ತಾರೆ ಆದರೆ ಮಕ್ಕಳಿಗೆ ಜೀವನ ಪಾಠವನ್ನು ಹೇಳಿಕೊಡುವುದು ಶಿಕ್ಷಕರಿಂದ ಮಾತ್ರ ಸಾಧ್ಯ, ಮುಖ್ಯವಾಗಿ ವಿದ್ಯರ‍್ಥಿಗಳಿಗೆ ವ್ಯಕ್ತಿತ್ವ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಕಾರಿಸಬೇಕು ಇಲ್ಲವಾದಲ್ಲಿ ನೀವು ಆರ‍್ಶ ಶಿಕ್ಷಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ‍್ಯಕ್ರಮದಲ್ಲಿ ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯ ಶಾಸಕರಾದ ಪಿ.ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕರ‍್ಜುನ ಬಾಲದಂಡಿ, ರ‍್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?